ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಬಕ್ರೀದ್‌ ಹಬ್ಬದ ಸಂಭ್ರಮ: ಹಲವೆಡೆ ವಾಹನ ಸಂಚಾರ ಮಾರ್ಗ ಬದಲು

Published 28 ಜೂನ್ 2023, 15:36 IST
Last Updated 28 ಜೂನ್ 2023, 15:36 IST
ಅಕ್ಷರ ಗಾತ್ರ

ಬೆಂಗಳೂರು: ಬಕ್ರೀದ್‌ ಹಬ್ಬದ ಅಂಗವಾಗಿ ಗುರುವಾರ (ಜೂನ್‌ 29) ಮುಸ್ಲಿಮರು ನಗರದ ಈದ್ಗಾ ಮೈದಾನದಲ್ಲಿ ಸಾರ್ವತ್ರಿಕ ಪ್ರಾರ್ಥನೆ ನಡೆಸಲಿದ್ದಾರೆ. ಹೀಗಾಗಿ, ಈ ಮೈದಾನದ ಸುತ್ತಮುತ್ತ ವಾಹನ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.

ನಗರದ ಬಸವೇಶ್ವರ ವೃತ್ತದಿಂದ ಸಿ.ಐ.ಡಿ ಜಂಕ್ಷನ್‌ವರೆಗಿನ ರಸ್ತೆ ನಿರ್ಬಂಧಿಸಲಾಗಿದೆ. ಬದಲಿಗೆ ದೇವರಾಜ ಅರಸು ರಸ್ತೆಯಲ್ಲಿ ಸಂಚರಿಸಬೇಕು. ಲಾಲ್‌ಬಾಗ್‌ ಮುಖ್ಯದ್ವಾರದಿಂದ ಕಣ್ಣಪ್ಪ ಪೆಟ್ರೋಲ್ ಬಂಕ್‌ವರೆಗಿನ ರಸ್ತೆಯಲ್ಲಿ ಸಂಚಾರ ನಿಷೇಧಿಸಿದ್ದು ವಿಲ್ಸನ್‌ ಗಾರ್ಡನ್‌ ಮುಖ್ಯರಸ್ತೆ, ಹೊಸೂರು ರಸ್ತೆಯನ್ನು ಬಳಸಿಕೊಳ್ಳಬಹುದು.

ಟೋಲ್‌ಗೇಟ್‌ ಜಂಕ್ಷನ್‌ನಿಂದ ಸಿರ್ಸಿ ವೃತ್ತದವರೆಗೆ ರಸ್ತೆ ನಿರ್ಬಂಧಿಸಲಾಗಿದೆ. ಸಿರ್ಸಿ ವೃತ್ತದಲ್ಲಿ ಬಲಕ್ಕೆ ತಿರುವು ಪಡೆದು ಬಿನ್ನಿಮಿಲ್ ಟ್ಯಾಂಕ್‌ಬಂಡ್‌ ರಸ್ತೆ ಮಾರ್ಗವಾಗಿ ಮಾಗಡಿ ರಸ್ತೆ ವಿಜಯನಗರದ ಮೂಲಕ ಮೈಸೂರು ರಸ್ತೆಗೆ ಸಂಪರ್ಕಿಸಬಹುದು. ಮೈಸೂರು ರಸ್ತೆ ಸಿಟಿ ಮಾರುಕಟ್ಟೆ ಕಡೆಗೆ ಸಂಚರಿಸುವವರು ಕಿಂಕೋ ಜಂಕ್ಷನ್‌ ಬಳಿ ಎಡಕ್ಕೆ ತಿರುವು ಪಡೆದು ವಿಜಯನಗರ ಮಾಗಡಿ ಮುಖ್ಯರಸ್ತೆಯ ಮಾರ್ಗವಾಗಿ ಸಿರ್ಸಿ ವೃತ್ತದ ಮೂಲಕ ಸಿಟಿ ಮಾರುಕಟ್ಟೆ ಕಡೆಗೆ ಸಂಚರಿಸಬಹುದು ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT