ಬೆಂಗಳೂರು: ವೆಂಕಟಪ್ಪ ಚಿತ್ರಶಾಲೆಯಲ್ಲಿರುವ ಲಕ್ಷಾಂತರ ರೂಪಾಯಿ ಮೌಲ್ಯದ ಅಪರೂಪದ ಕೆ.ವೆಂಕಟಪ್ಪ ಹಾಗೂ ಕೆ.ಕೆ. ಹೆಬ್ಬಾರ್ ಅವರ ವರ್ಣ ಕಲಾಕೃತಿಗಳ ಮೇಲೆ ಶಿಲೀಂಧ್ರ ಕಾಣಿಸಿಕೊಳ್ಳುತ್ತಿದೆ. ಇದರಿಂದಾಗಿ ಈ ಕಲಾಕೃತಿಗಳು ಅಂದ ಕಳೆದುಕೊಳ್ಳುತ್ತಿದ್ದು, ಕಲಾ ಪ್ರಪಂಚದಿಂದ ದೂರವಾಗುವ ಬಗ್ಗೆ ಕಲಾವಿದರ ವಲಯದಲ್ಲಿ ಕಳವಳ ವ್ಯಕ್ತವಾಗಿದೆ.

ಕಸ್ತೂರಬಾ ರಸ್ತೆಯಲ್ಲಿರುವ ಈ ಚಿತ್ರಶಾಲೆಯು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿದೆ. ‘ಸ್ಮಾರಕ ದತ್ತು’ ಯೋಜನೆಯಡಿ ಬ್ರಿಗೇಡ್ ಫೌಂಡೇಷನ್ ಇಲಾಖೆ ಜತೆಗೆ ಒಪ್ಪಂದ ಮಾಡಿಕೊಂಡು, ಸುಮಾರು ₹ 10 ಕೋಟಿ ವೆಚ್ಚದಲ್ಲಿ ಈ ಕಟ್ಟಡವನ್ನು ನವೀಕರಣ ಮಾಡಿದೆ. ನವೀಕೃತ ಕಟ್ಟಡವನ್ನು ಇದೇ ಜೂನ್ನಲ್ಲಿ ಉದ್ಘಾಟಿಸಲಾಗಿದೆ. ಪ್ರದರ್ಶನಕ್ಕೆ ಅಳವಡಿಸಲಾದ ‘ಕಲಾತಪಸ್ವಿ’ ಕೆ. ವೆಂಕಟಪ್ಪ ಹಾಗೂ ಕಲಾವಿದ ಕೆ.ಕೆ. ಹೆಬ್ಬಾರ್ ಅವರ ಅಪರೂಪದ ಕಲಾಕೃತಿಗಳ ಮೇಲೆ ಶಿಲೀಂಧ್ರ ಕಾಣಿಸಿಕೊಂಡಿದೆ. ನವೀಕೃತ ಕಟ್ಟಡದಲ್ಲಿ ಮೂರು ತಿಂಗಳು ಕಳೆಯುವುದರೊಳಗೆ ಕಲಾಕೃತಿಗಳು ಈ ಸ್ಥಿತಿಗೆ ತಲುಪಿರುವುದು ಕಲಾವಿದರ ಅಸಮಾಧಾನಕ್ಕೆ ಕಾರಣವಾಗಿದೆ.

ಮೂಲಸೌಕರ್ಯ ಕೊರತೆ ಎದುರಿಸುತ್ತಿದ್ದ ವೆಂಕಟಪ್ಪ ಚಿತ್ರಶಾಲೆ (ಆರ್ಟ್ ಗ್ಯಾಲರಿ) ಈಗ ಆಧುನಿಕತೆಗೆ ತೆರೆದುಕೊಂಡಿದೆ. ಅತ್ಯಾಧುನಿಕ ಬೆಳಕಿನ ವಿನ್ಯಾಸ, ಕೇಂದ್ರೀಕೃತ ಹವಾನಿಯಂತ್ರಣ ವ್ಯವಸ್ಥೆ, ಸುಸಜ್ಜಿತ ಸಭಾಂಗಣ, ಚರ್ಚಾ ಕೊಠಡಿ ಸೇರಿ ಹಲವು ಸೌಲಭ್ಯಗಳನ್ನು ಇಲ್ಲಿ ಹೊಸದಾಗಿ ಒದಗಿಸಲಾಗಿದೆ. ಈ ಚಿತ್ರಶಾಲೆ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ಕಾರ್ಯನಿರ್ವಹಿಸಲಿದೆ. ಈ ಅವಧಿಯಲ್ಲಿ ಕೇಂದ್ರೀಕೃತ ಹವಾನಿಯಂತ್ರಣ ಹಾಗೂ ಬೆಳಕಿನ ವ್ಯವಸ್ಥೆ ಚಾಲನೆಯಲ್ಲಿ ಇರಲಿದ್ದು, ಬಳಿಕ ಬಂದ್ ಮಾಡಲಾಗುತ್ತದೆ. ಇದರಿಂದಾಗಿ ತಾಪಮಾನದಲ್ಲಿ ವ್ಯತ್ಯಾಸವಾಗಿ, ಕಲಾಕೃತಿಗಳ ಮೇಲೆ ಶಿಲೀಂಧ್ರ ಕಾಣಿಸಿಕೊಳ್ಳುತ್ತಿದೆ.

ಹಳೆಯ ಕಲಾಕೃತಿ: ಕೆ.ವೆಂಕಟಪ್ಪ ಅವರು ನಿಧನರಾದ ಬಳಿಕ ಅವರ ಸಹೋದರ ಸಂಬಂಧಿ ರಾಮರಾಜು ಅವರು, ವೆಂಕಟಪ್ಪ ಅವರ ಕಲಾಕೃತಿಗಳನ್ನು ಸರ್ಕಾರಕ್ಕೆ ದಾನವಾಗಿ ನೀಡಿದ್ದರು. ಕಬ್ಬನ್ ಉದ್ಯಾನದ ಸರ್ಕಾರಿ ವಸ್ತು ಸಂಗ್ರಹಾಲಯದ ಆವರಣದಲ್ಲಿರುವ ಈ ಚಿತ್ರಶಾಲೆಯು 1975ರಲ್ಲಿ ಉದ್ಘಾಟನೆಗೊಂಡು, ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಿತ್ತು. ಅಂದಿನಿಂದ ಈ ಚಿತ್ರಶಾಲೆಯಲ್ಲಿ ವೆಂಕಟಪ್ಪ ಮತ್ತು ಕೆ.ಕೆ.ಹೆಬ್ಬಾರ್ ಅವರ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದೆ. ಈ ಕಲಾಕೃತಿಗಳು ನೂರು ವರ್ಷಗಳಿಗಿಂತ ಹಳೆಯದಾಗಿವೆ.

‘ಕಲಾಕೃತಿಗಳ ಮುಂಭಾಗದಲ್ಲೇ ಅಧಿಕ ಪ್ರಮಾಣದಲ್ಲಿ ಶಿಲೀಂಧ್ರ ಕಾಣಿಸಿಕೊಳ್ಳುತ್ತಿದೆ. ಕಲಾಕೃತಿಗಳ ಹಿಂಭಾಗದಲ್ಲಿ ಇನ್ನಷ್ಟು ಶಿಲೀಂಧ್ರ ಬೆಳೆದಿರುವ ಸಾಧ್ಯತೆಯಿದೆ. ಕಟ್ಟಡ ನವೀಕರಣಗೊಂಡು ಮೂರು ತಿಂಗಳು ಕಳೆಯುವುದರೊಳಗೇ ಇಲ್ಲಿನ ಪ್ರದರ್ಶಿತ ಕಲಾಕೃತಿಗಳಲ್ಲಿ ಶಿಲೀಂಧ್ರ ಕಾಣಿಸಿಕೊಂಡು, ಕೆಡುವ ಪರಿಸ್ಥಿತಿಗೆ ತಲುಪಿರುವುದಕ್ಕೆ ನಿರ್ವಹಣೆ ಮಾಡುತ್ತಿರುವವರ ನಿರ್ಲಕ್ಷ್ಯವೇ ಕಾರಣ’ ಎಂದು ದೃಶ್ಯ ಕಲಾವಿದ ಗಣಪತಿ ಅಗ್ನಿಹೋತ್ರಿ ಬೇಸರ ವ್ಯಕ್ತಪಡಿಸಿದರು.

ಎರಡು ಮಹಡಿಗಳಲ್ಲಿ ಕಲಾಕೃತಿ

ಕಟ್ಟಡದ ನೆಲ ಮಹಡಿಯಲ್ಲಿ ಮೂರು ಗ್ಯಾಲರಿಗಳಿವೆ. ಮೊದಲನೇ ಮಹಡಿಯಲ್ಲಿ ಕೆ.ವೆಂಕಟಪ್ಪ ಅವರ 29 ಜಲವರ್ಣ ಕಲಾಕೃತಿಗಳು ಪೆನ್ಸಿಲ್ನಿಂದ ರಚಿಸಿದ 31 ಚಿತ್ರಗಳು ಶಾಹಿಯಿಂದ ರಚಿಸಿದ 12 ಚಿತ್ರಗಳು ಐವರಿ ಫಲಕದ ಮೇಲೆ ರಚಿಸಿದ 3 ಚಿತ್ರ ಕೃತಿಗಳು 8 ಉಬ್ಬು ಶಿಲ್ಪಗಳು ಅವರು ನುಡಿಸುತ್ತಿದ್ದ 6 ವೀಣೆಗಳು ಹಾಗೂ ಅವರು ಬಳಸುತ್ತಿದ್ದ ವಸ್ತುಗಳನ್ನು ಪ್ರದರ್ಶಿಸಲಾಗಿದೆ. ಎರಡನೇ ಮಹಡಿಯಲ್ಲಿ ಕೆ.ಕೆ. ಹೆಬ್ಬಾರ್ ಅವರ 48 ಕಲಾಕೃತಿಗಳು ಹಾಗೂ ಅವರು ಅಧ್ಯಯನ ಮಾಡಿದ 13 ಪುಸ್ತಕಗಳನ್ನು ಪ್ರದರ್ಶನದಲ್ಲಿ ಇಡಲಾಗಿದೆ.

‘ಕಲಾಕೃತಿಗಳ ಸಂರಕ್ಷಣೆಗೆ ಕ್ರಮ’

‘ಕಲಾಕೃತಿಗಳ ಮೇಲೆ ಶಿಲೀಂಧ್ರ ಬೆಳೆದಿರುವುದು ಗಮನಕ್ಕೆ ಬಂದಿದ್ದು ಸಂರಕ್ಷಣೆಗೆ ಈಗಾಗಲೇ ಕ್ರಮವಹಿಸಲಾಗಿದೆ. ಈ ಸಂಬಂಧ ಇಂಟ್ಯಾಕ್ ಸಂಸ್ಥೆ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಸಂಸ್ಥೆಯು ಆಧುನಿಕ ಸಂರಕ್ಷಣಾ ವಿಧಿ-ವಿಧಾನಗಳಿಗೆ ಅನುಸಾರವಾಗಿ ಸಂರಕ್ಷಣಾ ಕಾರ್ಯವನ್ನು ಕೈಗೊಳ್ಳಲಿದೆ. ಕೇಂದ್ರೀಕೃತ ಹವಾನಿಯಂತ್ರಣ ವ್ಯವಸ್ಥೆ ನಿರಂತರ ಮಳೆಯಿಂದಾಗಿ ಕಟ್ಟಡದೊಳಗಿನ ತಾಪಮಾನದಲ್ಲಿ ವ್ಯತ್ಯಾಸವಾಗಿದೆ. ಇದರಿಂದಾಗಿ ಕಲಾಕೃತಿಗಳ ಮೇಲೆ ಶಿಲೀಂಧ್ರ ಕಾಣಿಸಿಕೊಂಡಿದೆ. ಈ ಅಪರೂಪದ ಕಲಾಕೃತಿಗಳು ಹಾಳಾಗದಂತೆ ಸಂರಕ್ಷಿಸಲಾಗುತ್ತಿದೆ’ ಎಂದು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತ ಎ. ದೇವರಾಜು ತಿಳಿಸಿದರು.

ಪುರಾತತ್ವ ಇಲಾಖೆ ಅಧಿಕಾರಿಗಳಿಗೆ ಕಲೆಯ ಬಗ್ಗೆ ಜ್ಞಾನ ಇಲ್ಲದಿರುವುದೇ ಈ ರೀತಿ ಆಗಲು ಕಾರಣ. ಕಲಾಕೃತಿಗಳ ಸಂರಕ್ಷಣೆಗೆ ತಜ್ಞರ ಅಭಿಪ್ರಾಯವನ್ನೂ ಪಡೆಯುತ್ತಿಲ್ಲ.
-ಚಿ.ಸು.ಕೃಷ್ಣಸೆಟ್ಟಿ ಕಲಾ ವಿಮರ್ಶಕ

ವೆಂಕಟಪ್ಪ ಹೆಬ್ಬಾರ್ ಅವರ ಕಲಾಕೃತಿಗಳ ಸ್ಥಿತಿ ನೋಡಿದರೆ ಸಂಕಟ ಆಗುತ್ತದೆ. ಇವು ಸಾಂಸ್ಕೃತಿಕ ಆಸ್ತಿಯಾಗಿದ್ದು ಅವುಗಳನ್ನು ಸಂರಕ್ಷಿಸಬೇಕು. ಕಲಾಕೃತಿಗಳ ಬಗ್ಗೆ ನಿರ್ಲಕ್ಷ್ಯ ಸರಿಯಲ್ಲ.
-ಶೀಲಾ ಗೌಡ, ಕಲಾವಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.