ಪೊಲೀಸರ ಸೋಗಿನಲ್ಲಿ ಮನೆಗೆ ನುಗ್ಗಿ ಲೈಂಗಿಕ ದೌರ್ಜನ್ಯ

ಬುಧವಾರ, ಜೂಲೈ 17, 2019
24 °C

ಪೊಲೀಸರ ಸೋಗಿನಲ್ಲಿ ಮನೆಗೆ ನುಗ್ಗಿ ಲೈಂಗಿಕ ದೌರ್ಜನ್ಯ

Published:
Updated:

ಬೆಂಗಳೂರು: ಅಪರಾಧ ವಿಭಾಗದ ಪೊಲೀಸ್ ಎಂದು ಹೇಳಿಕೊಂಡು ಮನೆಯೊಂದಕ್ಕೆ ನುಗ್ಗಿ ಯುವತಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದಡಿ ಶ್ರೀನಾಥ್ (34) ಎಂಬಾತನನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ.

‘ಯಲಹಂಕ ನ್ಯೂ ಟೌನ್ ನಿವಾಸಿಯಾದ ಶ್ರೀನಾಥ್, ಮೊಬೈಲ್ ಅಂಗಡಿ ಇಟ್ಟುಕೊಂಡಿದ್ದಾನೆ. 21 ವರ್ಷದ ಯುವತಿ ನೀಡಿದ್ದ ದೂರಿನನ್ವಯ ಆತನನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ವಿದ್ಯಾರಣ್ಯಪುರದ ಬಾಡಿಗೆ ಮನೆಯಲ್ಲಿ ಸ್ನೇಹಿತೆಯರ ಜತೆ ಸಂತ್ರಸ್ತೆ ವಾಸವಾಗಿದ್ದಾರೆ. ಜೂನ್ 26ರಂದು ಮನೆಗೆ ನುಗ್ಗಿದ್ದ ಆರೋಪಿ, ‘ನಾನು ಅಪರಾಧ ವಿಭಾಗದ ಪೊಲೀಸ್. ನಿಮ್ಮ ವಿರುದ್ಧ ಪ್ರಕರಣ ದಾಖಲಾಗಿದ್ದು, ಅದರ ವಿಚಾರಣೆಗಾಗಿ ಬಂದಿದ್ದೇನೆ’ ಎಂದು ಬೆದರಿಸಿದ್ದ.’

‘ಆರೋಪಿಯ ಮಾತಿನಿಂದ ಯುವತಿ ಗಾಬರಿಗೊಂಡಿದ್ದರು. ‘ಈ ಪ್ರಕರಣದಲ್ಲಿ ನಿಮ್ಮನ್ನು ಬಂಧಿಸುತ್ತೇನೆ. ಆ ರೀತಿ ಮಾಡಬಾರದೆಂದರೆ ನನ್ನೊಂದಿಗೆ ಲೈಂಗಿಕವಾಗಿ ಸಹಕರಿಸಬೇಕು’ ಎಂದು ಆರೋಪಿ ಒತ್ತಾಯಿಸಿದ್ದ. ಅದಕ್ಕೆ ನಿರಾಕರಿಸಿದ್ದ ಯುವತಿ ಆತನನ್ನು ತರಾಟೆಗೆ ತೆಗೆದುಕೊಂಡಿದ್ದರು. ಅದೇ ವೇಳೆಯೇ ಆರೋಪಿ, ಸಂತ್ರಸ್ತೆಯ ಮೈ, ಕೈಮುಟ್ಟಿ ದೌರ್ಜನ್ಯ ಎಸಗಿದ್ದಾನೆ’ ಎಂದು ಪೊಲೀಸರು ಹೇಳಿದರು.

ಜೈಲಿಗೆ ಹೋಗಿ ಬಂದಿದ್ದ: ‘ಅತ್ಯಾಚಾರಕ್ಕೆ ಯತ್ನ ಆರೋಪದಡಿ ಶ್ರೀನಾಥ್‌ ವಿರುದ್ಧ ಈ ಹಿಂದೆಯೂ ಪ್ರಕರಣ ದಾಖಲಾಗಿತ್ತು. ಇತ್ತೀಚೆಗಷ್ಟೇ ಜಾಮೀನು ಮೇಲೆ ಹೊರಬಂದಿದ್ದ ಆತ, ಪುನಃ ಕೃತ್ಯ ಎಸಗಿದ್ದಾನೆ’ ಎಂದು ಪೊಲೀಸರು ಹೇಳಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !