ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗಡಿಗಳ ಬಳಿ ಭಗವಾಧ್ವಜ; ಪೊಲೀಸರಿಗೆ ದೂರು

Last Updated 22 ಮೇ 2020, 21:14 IST
ಅಕ್ಷರ ಗಾತ್ರ

ಬೆಂಗಳೂರು: ವಿಜಯಗರದ ಹಲವು ಅಂಗಡಿಗಳ ಎದುರು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಭಗವಾಧ್ವಜಗಳನ್ನು ಕಟ್ಟಲಾಗಿದ್ದು, ಈ ಸಂಬಂಧ ವಕೀಲೆ ಮೈತ್ರೆಯಿ ಕೃಷ್ಣನ್ ಎಂಬುವರು ವಿಜಯನಗರ ಠಾಣೆಗೆ ದೂರು ನೀಡಿದ್ದಾರೆ.

‘ಕೊರೊನಾ ಸೋಂಕಿನ ಆತಂಕ ಜನರಲ್ಲಿದೆ. ಇದೇ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಭಗವಾಧ್ವಜವನ್ನು ಕಟ್ಟಿ ಎರಡು ಧರ್ಮಗಳ ಮಧ್ಯೆ ಧ್ವೇಷ ಹಾಗೂ ವೈರತ್ವ ಬೆಳೆಸುವುದು ತಪ್ಪು. ಧ್ವಜ ಕಟ್ಟಿರುವ ಎಂ.ಎಲ್.ಶಿವಕುಮಾರ್ ಹಾಗೂ ಅದರ ಬಗ್ಗೆ ಪೋಸ್ಟ್ ಪ್ರಕಟಿಸಿರುವ ‘ಉತ್ತರ ಕರ್ನಾಟಕ ಮಂದಿ’ ಫೇಸ್‌ಬುಕ್ ಪೇಜ್‌ ಅಡ್ಮಿನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಮೈತ್ರೆಯಿ ಒತ್ತಾಯಿಸಿದ್ದಾರೆ.

'ಮರ, ಕಂಬಗಳ ಮೇಲೂ ಭಗವಾಧ್ವಜ ಕಟ್ಟಿ ಸಾರ್ವಜನಿಕ ಆಸ್ತಿಗೂ ಧಕ್ಕೆ ತರಲಾಗಿದೆ. ಎರಡು ಸಮುದಾಯಗಳ ನಡುವೆ ವೈರತ್ವ–ದ್ವೇಷ ಉಂಟು ಮಾಡಲು ಪ್ರಯತ್ನಿಸಿದ ಹಾಗೂ ಸಾರ್ವಜನಿಕ ಶಾಂತಿಗೆ ಧಕ್ಕೆ ತರುವ ಉದ್ದೇಶವುಳ್ಳ ಆರೋಪದಡಿ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬೇಕು’ ಎಂದೂ ಅವರು ಆಗ್ರಹಿಸಿದ್ದಾರೆ.

ದೂರಿನ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿಯೊಬ್ಬರು, ‘ದೂರಿನ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧ್ವಜ ಕಟ್ಟಿದ ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಂದಲೂ ಮಾಹಿತಿ ಕೋರಲಾಗಿದೆ. ಸ್ಥಳೀಯ ವ್ಯಾಪಾರಿಗಳಿಂದಲೂ ಹೇಳಿಕೆ ಪಡೆಯಲಾಗಿದೆ’ ಎಂದರು.

‘ವೈಯಕ್ತಿಕವಾಗಿ ಧ್ವಜ ಕಟ್ಟಿಕೊಂಡಿರುವುದಾಗಿ ಕೆಲ ವ್ಯಾಪಾರಿಗಳು ಹೇಳಿಕೆ ನೀಡಿದ್ದಾರೆ. ತನಿಖೆ ಮುಂದುವರಿದಿದೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT