ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಎಸ್‌ಆರ್‌ಟಿಸಿಗೆ ವೊಲ್ವೊ ಮಲ್ಟಿ ಆ‍್ಯಕ್ಸೆಲ್‌ 20 ಬಸ್‌ ಸೇರ್ಪಡೆ

ಬಸ್‌ ಪರಿವೀಕ್ಷಣೆ ನಡೆಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
Published 6 ಜುಲೈ 2024, 15:54 IST
Last Updated 6 ಜುಲೈ 2024, 15:54 IST
ಅಕ್ಷರ ಗಾತ್ರ

ಬೆಂಗಳೂರು: ದೂರದ ಊರುಗಳ ಪ್ರಯಾಣಕ್ಕೆ ‘9600 ವೊಲ್ವೊ ಮಲ್ಟಿ ಆ‍್ಯಕ್ಸೆಲ್‌’ ಸೀಟರ್‌ ಪ್ರೋಟೊ ಟೈಪ್‌ (ಮೂಲ ಮಾದರಿ) 20 ಹೊಸ ಬಸ್‌ಗಳು ಇನ್ನು ಮೂರು ತಿಂಗಳಲ್ಲಿ ಕೆಎಸ್‌ಆರ್‌ಟಿಸಿಗೆ ಬರಲಿವೆ. ಈ ಪ್ರೀಮಿಯಂ ಬಸ್‌ಅನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಶನಿವಾರ ವೀಕ್ಷಿಸಿದರು.

ಮಂಗಳೂರು, ಕುಂದಾಪುರ, ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳಿಗೆ ಹಾಗೂ ಮುಂಬೈ, ಶಿರಡಿ, ಚೆನ್ನೈ, ಎರ್ನಾಕುಲಂ ಸೇರಿದಂತೆ ಹೊರರಾಜ್ಯಗಳ ಪ್ರದೇಶಗಳಿಗೆ ಈ ಬಸ್‌ಗಳು ಸಂಚರಿಸಲಿವೆ.

ಬಸ್‌ ವಿಶೇಷ: ಶಕ್ತಿಶಾಲಿ ಹ್ಯಾಲೊಜಿನ್ ಹೆಡ್‌ಲೈಟ್‌ ಮತ್ತು ಡೇ ರನ್ನಿಂಗ್ ಲೈಟ್‌ (ಡಿಆರ್‌ಎಲ್‌), ಹೊಸ‌ ಪ್ಲಶ್ ಒಳ ವಿನ್ಯಾಸ ಮತ್ತು ಬಾಹ್ಯ ಸ್ಕ್ಯಾಂಡಿನೇವಿಯನ್ ವಿನ್ಯಾಸವನ್ನು ಈ ಬಸ್‌ ಹೊಂದಿದೆ.

ಉತ್ತಮ ಇಂಧನ ದಕ್ಷತೆ, ನವೀನ ತಂತ್ರಜ್ಞಾನದಿಂದ ಸುಧಾರಿತ ಎಂಜಿನ್ ಹೊಂದಿದ್ದು, ಅತ್ಯುತ್ತಮ ಕಾರ್ಯಕ್ಷಮತೆ ಹಾಗೂ ಸುಧಾರಿತ ಎಂಜಿನ್‌ ಕೆಎಂಪಿಎಲ್ ನೀಡುತ್ತದೆ. ಬಸ್ಸಿನ ಉದ್ದದಲ್ಲಿ ಶೇ 3.5 ಹೆಚ್ಚಳ ಇರುವುದರಿಂದ ಪ್ರಯಾಣಿಕರ ಆಸನಗಳ ನಡುವಿನ ಅಂತರ ಹೆಚ್ಚಾಗಿದೆ. ಬಸ್ಸಿನ ಎತ್ತರದಲ್ಲಿ ಶೇ 5.6 ಹೆಚ್ಚಳ ಇರುವುದರಿಂದ ಹೆಚ್ಚಿನ ಹೆಡ್‌ ರೂಂ ಹೊಂದಿದೆ. ಕಿಟಕಿ ಗಾಜು ಶೇ 9.5ರಷ್ಟು ವಿಸ್ತಾರವಾಗಿದೆ. ಲಗೇಜ್‌ಗೆ ವಿಶಾಲ ಸ್ಥಳಾವಕಾಶವಿದೆ.

ಹೊಸ ಜನರೇಷನ್ ಮೊಬೈಲ್ ಚಾರ್ಜಿಂಗ್ ಪಾಯಿಂಟ್‌ಗಳನ್ನು ಒಳಗೊಂಡಿದೆ. ಉತ್ತಮ ಹವಾನಿಯಂತ್ರಣ ವ್ಯವಸ್ಥೆ ಇರುತ್ತದೆ. ಉನ್ನತ ದರ್ಜೆಯ, ಉತ್ತಮ ವಿನ್ಯಾಸದ ಆಸನಗಳಿವೆ. ಸುರಕ್ಷತೆಗಾಗಿ ಹಿಂಭಾಗದಲ್ಲಿ ಫಾಗ್‌ ಲೈಟ್‌ ಅಳವಡಿಸಲಾಗಿದೆ. ಫೈರ್ ಅಲಾರ್ಮ್ ಮತ್ತು ಪ್ರೊಟೆಕ್ಷನ್ ಸಿಸ್ಟಮ್ (ಎಫ್‌ಎಪಿಎಸ್‌) ಅಳವಡಿಸಲಾಗಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT