ಬೆಂಗಳೂರು: ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ‘ನನ್ನ ಮತ ನನ್ನ ಭವಿಷ್ಯ– ಒಂದು ಮತದ ಶಕ್ತಿ’ ಎಂಬ ವಿಷಯದ ಬಗ್ಗೆ ರಾಷ್ಟ್ರ ಮಟ್ಟದ ಮತದಾರರ ಜಾಗೃತಿಗಾಗಿ ವಿವಿಧ ಸ್ಪರ್ಧೆಗಳನ್ನು ಚುನಾವಣಾ ಆಯೋಗ ಆಯೋಜಿಸಿದೆ.

ರಸಪ್ರಶ್ನೆ, ಸ್ಲೋಗನ್, ಗಾಯನ, ಚಿತ್ರೀಕರಣ ಮತ್ತು ಪೋಸ್ಟರ್ ವಿನ್ಯಾಸ ಸ್ಪರ್ಧೆಗಳನ್ನು ನಡೆಸುತ್ತಿದೆ. ರಸಪ್ರಶ್ನೆ ಸ್ಪರ್ಧೆಯು ಮೂರು ಹಂತದಲ್ಲಿ ನಡೆಯಲಿದ್ದು, ವಿಜೇತರಿಗೆ ಇ–ಪ್ರಮಾಣ ಪತ್ರ ನೀಡಲಾಗುತ್ತದೆ. ಸ್ಲೋಗನ್ ಸ್ಪರ್ಧೆಯಲ್ಲಿ ಭಾಗವಹಿಸುವವರು ಇತರರಿಗೆ ಪ್ರೇರೇಪಿಸುವ ರೀತಿಯ ಆಕರ್ಷಕ ಪೋಸ್ಟರ್ ರಚಿಸಬೇಕು. ಗಾಯನ ಸ್ಪರ್ಧೆಗೆ ಶಾಸ್ತ್ರೀಯ, ಸಮಕಾಲೀನ ಹಾಗೂ ರ್‍ಯಾಪ್ ಪ್ರಕಾರದಲ್ಲಿ ಹಾಡುಗಳನ್ನು ರಚಿಸಬೇಕು. ಕಲಾವಿದರು ಮತ್ತು ಗಾಯಕರು ತಮ್ಮ ಆಯ್ಕೆಯ ಯಾವುದೇ ಸಂಗೀತ ವಾದ್ಯವನ್ನು ಬಳಸಿಕೊಳ್ಳಬಹುದು ಮತ್ತು ಹಾಡಿನ ಅವಧಿ 3 ನಿಮಿಷ ಮೀರಬಾರದು.

ಮತದಾನದ ಪ್ರಾಮುಖ್ಯತೆ ಬಗ್ಗೆ ಅರಿವು ಮೂಡಿಸುವ 1 ನಿಮಿಷ ಮೀರದ ವಿಡಿಯೊಗಳನ್ನು ಚಿತ್ರೀಕರಣ ಸ್ಪರ್ಧೆಗೆ ಕಳುಹಿಸಬಹುದು. ಮತದಾನದ ಪ್ರಮುಖ್ಯತೆ ಬಗ್ಗೆ ಚಿಂತನೆಗೆ ಪ್ರೇರೇಪಿಸುವ ಚಿತ್ರಗಳನ್ನು ಪೋಸ್ಟರ್ ವಿನ್ಯಾಸ ಸ್ಪರ್ಧೆಗೆ ರಚಿಸಬೇಕು. ವಿಜೇತರಿಗೆ ₹1 ಲಕ್ಷದವರೆಗೆ ಬಹುಮಾನ ನೀಡಲಾಗುವುದು. ಮಾರ್ಚ್ 31ರೊಳಗೆ voter-contest@eci.gov.inನಲ್ಲಿ ನೊಂದಾಯಿಸಿಕೊಳ್ಳಬೇಕು ಎಂದು ನಗರ ಜಿಲ್ಲಾ ಚುನಾವಣಾಧಿಕಾರಿ ಪರವಾಗಿ ಬಿಬಿಎಂಪಿ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.