ಮಂಗಳವಾರ, ಡಿಸೆಂಬರ್ 7, 2021
19 °C

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನದಲ್ಲಿ ಕರ್ತವ್ಯನಿರತ ಯೋಧನಿಗೆ ಬಾಲಕನ ಸೆಲ್ಯೂಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕರ್ತವ್ಯನಿರತ ಯೋಧನಿಗೆ ಬಾಲಕನೊಬ್ಬ ಸೆಲ್ಯೂಟ್ ಮಾಡಿದ್ದು, ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (ಸಿಆರ್‌ಪಿಎಫ್) ಸಿಬ್ಬಂದಿ, ನಿಲ್ದಾಣದ ಹೊರಭಾಗದ ರಸ್ತೆಯಲ್ಲಿ ಶಸ್ತ್ರಸಜ್ಜಿತ ವಾಹನದಲ್ಲಿ ನಿಂತು ಕಾವಲು ಕಾಯುತ್ತಿದ್ದರು. ಅದೇ ಸ್ಥಳಕ್ಕೆ ಪೋಷಕರ ಜೊತೆ ಬಂದಿದ್ದ ಬಾಲಕ, ಯೋಧನನ್ನು ನೋಡಿ ನಿಂತುಕೊಂಡಿದ್ದ.

ಕೆಲ ಕ್ಷಣ ಯೋಧನನ್ನು ನೋಡಿ ಶಿಸ್ತಿನಿಂದ ವರ್ತಿಸಿದ್ದ ಬಾಲಕ, ನಂತರ ಎದೆ ಉಬ್ಬಿಸಿ ಸೆಲ್ಯೂಟ್ ಮಾಡಿದ್ದ. ಇದಕ್ಕೆ ಪ್ರತಿಯಾಗಿ ಯೋಧ ಸಹ ಸೆಲ್ಯೂಟ್ ಹೊಡೆದರು. ಇದೇ ವಿಡಿಯೊವನ್ನು ಹಲವರು, ಸಾಮಾಜಿಕ ಮಾಧ್ಯಮಗಳನ್ನು ಹಂಚಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು