ಸೋಮವಾರ, ಮೇ 17, 2021
31 °C

ಇಂದು ವಿವಿಧೆಡೆ ನೀರಿನ ಅದಾಲತ್

ಬೆಂಗಳೂರು: Updated:

ಅಕ್ಷರ ಗಾತ್ರ : | |

ಬೆಂಗಳೂರು: ಜಲಮಂಡಳಿಯು ಗುರುವಾರ ಬೆಳಿಗ್ಗೆ 9.30ರಿಂದ 11ಗಂಟೆಯವರೆಗೆ ನಗರದ ವಿವಿಧೆಡೆ ನೀರಿನ ಅದಾಲತ್ ಆಯೋಜಿಸಿದೆ. 

ನೀರಿನ ಬಿಲ್ಲು, ನೀರು ಮತ್ತು ಒಳ ಚರಂಡಿ ಸಂಪರ್ಕ ಕಲ್ಪಿಸುವಲ್ಲಿ ವಿಳಂಬ ಮತ್ತಿತರ ಕುಂದು– ಕೊರತೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.

ದಕ್ಷಿಣ ಉಪವಿಭಾಗ ವ್ಯಾಪ್ತಿಯಡಿ ಬನಗಿರಿ, ಪೂರ್ಣಪ್ರಜ್ಞಾ ಬಡಾವಣೆ, ಬನಶಂಕರಿ, ಪದ್ಮನಾಭ ನಗರ, ಕುಮಾರಸ್ವಾಮಿ ಬಡಾವಣೆ, ಇಸ್ರೊ ಬಡಾವಣೆ, ಪಶ್ಚಿಮ ಉಪವಿಭಾಗದಡಿ ಮಾಗಡಿ ರಸ್ತೆ 1,2, ಹೊಸಹಳ್ಳಿ ಪಂಪ್ ಹೌಸ್, ಮೈಸೂರು ರಸ್ತೆ, ಆಗ್ನೇಯ ಪವಿಭಾಗದಡಿ ಹಲಸೂರು, ದೊಮ್ಮ ಲೂರು, ಜಾನ್ಸನ್ ಮಾರ್ಕೆಟ್, ನೈರುತ್ಯ ಉಪವಿಭಾಗದಡಿ ವಿ.ವಿ.ಪುರ, ಸುಧಾಮ ನಗರ-2, ಕೆಂಪೇಗೌಡ ನಗರ, ಜಗಜೀವನ್ ರಾಮ್ ನಗರ, ಚಾಮರಾಜಪೇಟೆ, ಕೇಂದ್ರ ಉಪ ವಿಭಾಗದಡಿ ಚಿಕ್ಕಲಾಲ್ ಬಾಗ್, ಬನ್ನಪ್ಪ ಪಾರ್ಕ್, ಸುಧಾಮನಗರ-1, ಉತ್ತರ ಉಪವಿಭಾಗದಡಿ ಎಂ.ಇ.ಐ. ಬಡಾವಣೆ, ಸೋಲದೇವನಹಳ್ಳಿ, ಬಾಹುಬಲಿನಗರ, ಪೂರ್ವ ಉಪ ವಿಭಾ ಗದಡಿ ಎಚ್.ಆರ್.ಬಿ.ಆರ್.ಬಡಾವಣೆ, ಕಲ್ಯಾಣ್ ನಗರ, ಓ.ಎಂ.ಬಿ.ಆರ್.ಬಡಾವಣೆ, ಎಚ್.ಬಿ.ಆರ್ ಬಡಾವಣೆ ನಿವಾಸಿಗಳು ಪಾಲ್ಗೊಳ್ಳಬಹುದಾಗಿದೆ.

ವಾಯವ್ಯ ಉಪವಿಭಾಗದಡಿ ಕೇತಮಾರನಹಳ್ಳಿ, ಮಹಾಲಕ್ಷ್ಮಿ ಬಡಾವಣೆ, ರಾಜಾಜಿನಗರ- 1, 2 ಹಾಗೂ ನಂದಿನಿ ಬಡಾವಣೆ-1ರ ನಿವಾಸಿಗಳು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. 

ಮಂಡಳಿಯ ದೂರು ನಿರ್ವ ಹಣಾ ಕೇಂದ್ರದ ದೂರವಾಣಿ 080 2223 8888 ಅಥವಾ ವಾಟ್ಸ್ಆ್ಯಪ್‌ ಸಂ.8762228888ಕ್ಕೆ ಸಂಪರ್ಕಿಸಿಯೂ ಕುಂದು– ಕೊರತೆಗಳನ್ನು ಬಗೆಹರಿಸಿಕೊಳ್ಳಬಹುದು ಎಂದು ಮಂಡಳಿಯ ಪ್ರಕಟಣೆಯ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು