ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಪೂರೈಕೆಯಲ್ಲಿ ವ್ಯತ್ಯಯ

Last Updated 19 ಡಿಸೆಂಬರ್ 2020, 19:57 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ನಿರ್ಮಾಣವಾಗುತ್ತಿರುವ ಗೊಟ್ಟಿಗೆರೆ–ನಾಗವಾರ ಮಾರ್ಗದಲ್ಲಿ ನಿರ್ಮಾಣವಾಗುತ್ತಿರುವ ನೆಲದಡಿಯ ನಿಲ್ದಾಣಗಳ ನಿರ್ಮಾಣ ಕಾಮಗಾರಿಗೆ ನೀರು ಪೂರೈಸುವ ಕೊಳವೆ ಅಳವಡಿಕೆ ಕಾರ್ಯ ಕೈಗೆತ್ತಿಕೊಳ್ಳಬೇಕಿರುವುದರಿಂದ ವೆಲ್ಲಾರ ಜಂಕ್ಷನ್, ಡೇರಿ ವೃತ್ತ ಹಾಗೂ ಬನ್ನೇರುಘಟ್ಟ ರಸ್ತೆಯ ಕೆಲವೆಡೆ ಇದೇ 21 ಮತ್ತು 22ರಂದು ನೀರು ಪೂರೈಕೆಯಲ್ಲಿ ವ್ಯತ್ಯಯವಾಗುವುದು ಎಂದು ಜಲಮಂಡಳಿ ಹೇಳಿದೆ.

ಈ ಕಾಮಗಾರಿ ಕೈಗೊಳ್ಳಲು ಕಾವೇರಿ 1ನೇ ಹಂತದ ಪಂಪ್‍ಗಳನ್ನು ಸ್ಥಗಿತಗೊಳಿಸಬೇಕಾಗುತ್ತದೆ. ಇದರಿಂದ 21ರ ಬೆಳಿಗ್ಗೆ 7ರಿಂದ 22ರ ಬೆಳಗಿನ ಜಾವ 3ರವರೆಗೆ ಈ ಕೆಳಕಂಡ ಪ್ರದೇಶದಲ್ಲಿ ನೀರು ಪೂರೈಕೆ ಇರುವುದಿಲ್ಲ ಎಂದು ಅದು ಹೇಳಿದೆ.

ಶಾಂತಲಾ ನಗರ, ಶಾಂತಿ ನಗರ, ವಿನಾಯಕ ನಗರ, ಆನೆಪಾಳ್ಯ, ಎಲ್.ಆರ್. ನಗರ, ಅಂಬೇಡ್ಕರ್ ನಗರ, ನೀಲಸಂದ್ರ, ಆಸ್ಟಿನ್‍ಟೌನ್, ಈಜಿಪುರ, ವಿವೇಕನಗರ, ಅಶೋಕ ನಗರ, ರಿಚ್‍ಮಂಡ್ ಟೌನ್, ಎಂ.ಜಿ.ರಸ್ತೆ, ಜೆ.ಕೆ.ಪುರ, ಎಂ.ಬಿ.ಗಾರ್ಡನ್, ವಿಕ್ಟೋರಿಯಾ ಬಡಾವಣೆ, ಜೀವನ್ ಭಿಮಾನಗರ, ಎಚ್.ಎ.ಎಲ್ 2 ಮತ್ತು 3ನೇ ಹಂತ, ದೊಮ್ಮಲೂರು, ಅಮರಜ್ಯೋತಿ ಬಡಾವಣೆ, ಕೋಡಿಹಳ್ಳಿ, ಹನುಮಂತಪ್ಪ ಬಡಾವಣೆ, ಹಲಸೂರು, ಜೋಗುಪಾಳ್ಯ, ಕೇಂಬ್ರಿಜ್‌ ಬಡಾವಣೆ, ಗೌತಮ್ ಪುರ, ದೀನಬಂಧು ನಗರ, ರಾಜೇಂದ್ರ ನಗರ, ವೆಂಕಟಸ್ವಾಮಿ ರೆಡ್ಡಿ ಲೇಔಟ್, ಆಡುಗೋಡಿ, ಕೋರಮಂಗಲ, ಕೆ.ಎಚ್.ಬಿ ಕಾಲೋನಿ, ಜಯನಗರ 3 ಮತ್ತು 4ನೇ ಬ್ಲಾಕ್, ಜೋಗಿ ಕಾಲೊನಿ ಹಾಗೂ ಚಿಕ್ಕ ಆಡುಗೋಡಿ, ಬೃಂದಾವನ ನಗರ.

ಮಾರುತಿ ನಗರ, ನೇತಾಜಿ ನಗರ, ಕೇಶವನಗರ, ಕೆ.ಪಿ.ಅಗ್ರಹಾರ, ನ್ಯೂ ಬಿನ್ನಿಲೇಔಟ್, ಚಾಮರಾಜಪೇಟೆ, ವಿದ್ಯಾಪೀಠ, ಶ್ರೀನಿವಾಸ ನಗರ, ಬ್ಯಾಂಕ್ ಕಾಲೊನಿ, ಐ.ಟಿ.ಐ ಬಡಾವಣೆ, ಗುರುರಾಜ ಬಡಾವಣೆ, ಕತ್ರಿಗುಪ್ಪೆ, ಎನ್.ಆರ್.ಕಾಲೊನಿ, ಕುಮಾರಸ್ವಾಮಿ ಬಡಾವಣೆ, ಬನಶಂಕರಿ 1ನೇ ಹಂತ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT