ಬುಧವಾರ, ಜನವರಿ 22, 2020
24 °C

ನಗ್ನವಾಗಿ ವಾಟ್ಸ್‌ಆ್ಯಪ್‌ ಕರೆ ಮಾಡುತ್ತಿದ್ದ !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಹಿಳೆಯೊಬ್ಬರಿಗೆ ವಾಟ್ಸ್‌ಆ್ಯಪ್‌ನಲ್ಲಿ ವಿಡಿಯೊ ಕರೆ ಮಾಡಿ ನಗ್ನವಾಗಿ ನಿಂತು ಅಸಭ್ಯವಾಗಿ ವರ್ತಿಸುತ್ತಿದ್ದ ಅಪರಿಚಿತನೊಬ್ಬನ ವಿರುದ್ಧ ಜೀವನ್‌ಬಿಮಾ ನಗರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

‘26 ವರ್ಷದ ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಕರೆ ಮಾಡಿದ್ದ ವ್ಯಕ್ತಿ ಯಾರು ಎಂಬುದು ಗೊತ್ತಾಗಿಲ್ಲ. ಆತನ ಮೊಬೈಲ್ ಸಂಖ್ಯೆ ಆಧರಿಸಿ ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಇದೇ 7ರಂದು ಬೆಳಿಗ್ಗೆ ಮಹಿಳೆಗೆ ವಿಡಿಯೊ ಕರೆ ಮಾಡಿದ್ದ ಅಪರಿಚಿತ, ನಗ್ನವಾಗಿ ನಿಂತುಕೊಂಡಿದ್ದ. ತನ್ನ ಅಂಗಾಂಗಗಳನ್ನು ಮುಟ್ಟಿ ಅಸಭ್ಯವಾಗಿ ವರ್ತಿಸುತ್ತಿದ್ದ. ಅದನ್ನು ಕಂಡು ಹೆದರಿದ ಮಹಿಳೆ ಕರೆ ಕಡಿತಗೊಳಿಸಿದ್ದರು. ಪತಿಗೆ ವಿಷಯ ತಿಳಿಸಿದ್ದರು’ ಎಂದರು.

‘ಮರುದಿನವೂ ಮಹಿಳೆಗೆ ವಿಡಿಯೊ ಕರೆ ಮಾಡಿದ್ದ ಆರೋಪಿ ಪುನಃ ನಗ್ನವಾಗಿ ನಿಂತಿದ್ದ. ಆ ದೃಶ್ಯವನ್ನು ಪತಿ ವಿಡಿಯೊ ಚಿತ್ರೀಕರಣ ಮಾಡಿಕೊಂಡಿದ್ದಾರೆ. ಅದರ ಸಮೇತವೇ ದೂರು ನೀಡಿದ್ದಾರೆ’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು