ಕೃತ್ಯ ಎಸಗಿದ ಆರೋಪದ ಅಡಿ ಕೊಲೆಯಾದ ಮಹೇಶ್ ಅವರ ಪತ್ನಿ ತೇಜಸ್ವಿ ಹಾಗೂ ಆಕೆಯ ಪ್ರಿಯಕರ ಗಜೇಂದ್ರ ಎಂಬುವವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಹಾಸನದ ಅರಕಲಗೂಡಿನ ದೊಂಬರಪಾಳ್ಯ ನಿವಾಸಿ ಮಹೇಶ್ ಮತ್ತು ತೇಜಸ್ವಿನಿ ಕೆಲವು ವರ್ಷಗಳ ಹಿಂದೆ ಮದುವೆ ಆಗಿದ್ದರು. ಹಗದೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಮಹೇಶ್, ಆಟೋ ಚಾಲನೆ ಜತೆಗೆ ರಂಗೋಲಿ ಮಾರಾಟ ಮಾಡುತ್ತಿದ್ದರು. ತೇಜಸ್ವಿನಿ ಅವರು ಖಾಸಗಿ ಫೈನಾನ್ಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ದಂಪತಿ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಈ ನಡುವೆ ತೇಜಸ್ವಿನಿ ಹಾಗೂ ಗಜೇಂದ್ರ ಅವರ ಮಧ್ಯೆ ಸಲುಗೆ ಏರ್ಪಟ್ಟಿತ್ತು. ಇಬ್ಬರೂ ಸಂಚು ರೂಪಿಸಿ ಕೊಲೆ ಮಾಡಿದ್ದಾರೆ ಎಂಬುದು ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.