ಜುಲೈ 23ರ ರಾತ್ರಿ 11 ಗಂಟೆಯಾದರೂ ಪಿ.ಜಿ. ಗೇಟ್ ತೆರೆದಿತ್ತು. ಭದ್ರತಾ ಸಿಬ್ಬಂದಿ ಇರಲಿಲ್ಲ. ಈ ಲೋಪಗಳನ್ನು ಬಳಸಿಕೊಂಡೇ ಅಭಿಷೇಕ್ ಘೋಸಿ ಪಿ.ಜಿ. ಪ್ರವೇಶಿಸಿ, 303ರ ಕೊಠಡಿಯಲ್ಲಿ ವಾಸವಿದ್ದ ಕೃತಿಕುಮಾರಿ (23) ಅವರನ್ನು ಹೊರಗೆ ಎಳೆದು ಚಾಕುವಿನಿಂದ ಇರಿದು ಹತ್ಯೆಗೈದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.