ಮಂಗಳವಾರ, ಜೂನ್ 28, 2022
26 °C

‘ವಂಡರ್‌ ಲಾ: ಶೇ 50 ರಿಯಾಯಿತಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮೋಜಿನ ಆಟದ ಪ್ರಿಯರಿಗಾಗಿ ವಂಡರ್‌ ಲಾ ವಿಶೇಷ ಕೊಡುಗೆ ನೀಡಲು ಮುಂದಾಗಿದೆ. ಈ ಸಂದರ್ಭದಲ್ಲಿ ವಂಡರ್‌ ಲಾ ಟಿಕೆಟ್‌ ಕಾಯ್ದಿರಿಸುವವರಿಗೆ ಶೇ 50 ರಷ್ಟು ರಿಯಾಯಿತಿಯನ್ನು ಅದು ಘೋಷಿಸಿದೆ.

ಈಗ ಮುಂಗಡ ಕಾಯ್ದಿರಿಸಿಕೊಂಡರೆ, ಸರ್ಕಾರದ ನಿಯಮ ಸಡಿಲಗೊಂಡು ರೆಸ್ಟೋರೆಂಟ್ ತೆರೆಯಲು ಅವಕಾಶ ನೀಡಿದ ಕೂಡಲೇ ಈ ಸೌಲಭ್ಯ ಒದಗಿಸಲಾಗುತ್ತದೆ. ಇವರಿಗೆ ಟಿಕೆಟ್ ದರದಲ್ಲಿ ಶೇ 50ರಷ್ಟು ರಿಯಾಯಿತಿ ಸಿಗಲಿದೆ. ಯಾವುದೇ ದಿನವಾದರೂ ಈ ಟಿಕೆಟ್‌ನೊಂದಿಗೆ ವಂಡರ್‌ಲಾಗೆ ಭೇಟಿ ನೀಡಬಹುದು.ಇದು ಬೆಂಗಳೂರು, ಕೊಚ್ಚಿ, ಹೈದರಾಬಾದ್‌ನಲ್ಲಿರುವ ಎಲ್ಲ ವಂಡರ್‌ಲಾದಲ್ಲಿಯೂ ಅನ್ವಯವಾಗಲಿದೆ.

ಗ್ರಾಹಕರು ಜೂನ್ 6ರವರೆಗೆ ಟಿಕೆಟ್ ಕಾಯ್ದಿರಿಸಲು ಅವಕಾಶ ನೀಡಲಾಗಿದೆ. ವಿವರಗಳಿಗೆ ವಂಡರ್‌ಲಾ ವೆಬ್‌ಸೈಟ್ https://www.wonderla.com ವೀಕ್ಷಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು