ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಪರಿಸರ ದಿನ: ‘ಆಲ್ಟರ್ನೆಟಿವ್‌’ ರೀಲ್ಸ್ ಸ್ಪರ್ಧೆ

Published 23 ಏಪ್ರಿಲ್ 2024, 16:02 IST
Last Updated 23 ಏಪ್ರಿಲ್ 2024, 16:02 IST
ಅಕ್ಷರ ಗಾತ್ರ

ಬೆಂಗಳೂರು: ವಿಶ್ವ ಪರಿಸರ ದಿನದ ಪ್ರಯುಕ್ತ ನಗರದ ವಿಮೊವ್ ಫೌಂಡೇಷನ್ ‘ಆಲ್ಟರ್ನೆಟಿವ್ 24’ (ಪರ್ಯಾಯ) ಶೀರ್ಷಿಕೆಯಡಿ ಈ ಬಾರಿ ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ವಿಡಿಯೊ ರೀಲ್ಸ್ ಸ್ಪರ್ಧೆ ಹಮ್ಮಿಕೊಂಡಿದೆ.

‘ಯೂತ್ ಫಾರ್ ಗ್ರೀನ್ ಆ್ಯಂಡ್ ವೈಬ್ರಂಟ್ ಬೆಂಗಳೂರು’ ಪರಿಕಲ್ಪನೆಯಡಿ ‘ಆಲ್ಟರ್ನೆಟಿವ್ 24’ ಹಮ್ಮಿಕೊಳ್ಳಲಾಗಿದೆ. ನಗರದ ಕಾಲೇಜುಗಳ ಹಾಗೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, 30 ವರ್ಷದೊಳಗಿನವರು ಏಕವ್ಯಕ್ತಿಯಾಗಿ ಅಥವಾ ಗುಂಪಾಗಿ ಈ ರೀಲ್ಸ್ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಜಲ ಸಂರಕ್ಷಣೆ, ಹಸಿರು ತಾಣದ ಅಗತ್ಯ, ತ್ಯಾಜ್ಯ ನಿರ್ವಹಣೆ, ಸಾಗಣೆ ಕ್ರಮಗಳಲ್ಲಿ ಬದಲಾವಣೆ ಹಾಗೂ ಹಸಿರು ಇಂಧನ ಪರಿಹಾರ – ಈ ವಿಷಯಗಳ ಕುರಿತು ರೀಲ್ಸ್‌ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ಪರಿಕಲ್ಪನೆಯು ಫೌಂಡೇಶನ್‌ನ ಸಂಸ್ಥಾಪಕ ವಿನಯ್ ಶಿಂಧೆ ನೇತೃತ್ವದಲ್ಲಿ ನಡೆಯಲಿವೆ.

ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ನೋಂದಣಿಗೆ ಇದೇ 30 ಕಡೆಯ ದಿನವಾಗಿದ್ದು, ವಿಡಿಯೊ ರೀಲ್ಸ್‌ಗಳನ್ನು ಸಲ್ಲಿಸಲು ಮೇ 13ರವರೆಗೆ ಅವಕಾಶವಿದೆ. ಸ್ಪರ್ಧೆಯ ವಿಜೇತರಿಗೆ ಅತ್ಯಾಕರ್ಷಕ ಬಹುಮಾನಗಳನ್ನೂ ನೀಡಲಾಗುತ್ತದೆ. ಆಯ್ದ ವಿಡಿಯೊಗಳನ್ನು ನಗರಕ್ಕೆ ಸಂಬಂಧಿಸಿದ ಸರ್ಕಾರಿ ವೆಬ್‌ಸೈಟ್‌ಗಳಲ್ಲಿ ಪ್ರಕಟ ಮಾಡಲಾಗುತ್ತದೆ. ಜೂನ್ 1ರಂದು ಎಂ.ಎಸ್.ರಾಮಯ್ಯ ವಿಶ್ವವಿದ್ಯಾಲಯದಲ್ಲಿ ‘ಆಲ್ಟರ್ನೆಟಿವ್ 24’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮದಲ್ಲಿಯೇ ಬಹುಮಾನ ವಿತರಿಸಲಾಗುತ್ತದೆ ಎಂದು ಫೌಂಡೇಷನ್ ತಿಳಿಸಿದೆ. 

ಈ ಕಾರ್ಯಕ್ರಮಕ್ಕೆ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸೇರಿ ವಿವಿಧ ಇಲಾಖೆಗಳು ಸಹಯೋಗ ನೀಡಿವೆ. ಒಂದರಿಂದ ಮೂರು ನಿಮಿಷಗಳ ರೀಲ್ಸ್‌ಗಳನ್ನು alternative.net.inನಲ್ಲಿ ಅಪ್‌ಲೋಡ್ ಮಾಡಬೇಕಾಗುತ್ತದೆ. ತಜ್ಞರ ಸಮಿತಿಯು ಪ್ರತಿ ವಿಭಾಗದಲ್ಲಿ ಮೂರು ವಿಡಿಯೊ ರೀಲ್ಸ್‌ಗಳನ್ನು ಆಯ್ಕೆ ಮಾಡುತ್ತವೆ ಎಂದು ಹೇಳಿದೆ.

‘ಪರಿಸರ ನಾಶದಿಂದ ನಗರವು ನೀರು ಸೇರಿ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದೆ. ಪರಿಸರ ಜಾಗೃತಿ ಮೂಡಿಸುವ ಉದ್ದೇಶದಿಂದ ಯುವಜನರಿಗಾಗಿ ರೀಲ್ಸ್‌ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ’ ಎಂದು ವಿನಯ್ ಶಿಂಧೆ ತಿಳಿಸಿದ್ದಾರೆ. 

ವಿವರಕ್ಕೆ: alternative.net.in ಅಥವಾ 9845091409

ವಿನಯ್ ಶಿಂಧೆ 
ವಿನಯ್ ಶಿಂಧೆ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT