ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಎಂಸಿ ಅಧ್ಯಕ್ಷರಾಗಿ ಯೋಗಾನಂದ ರೆಡ್ಡಿ ಆಯ್ಕೆ

Published 4 ಜುಲೈ 2024, 15:30 IST
Last Updated 4 ಜುಲೈ 2024, 15:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ವೈದ್ಯಕೀಯ ಪರಿಷತ್ತಿನ (ಕೆಎಂಸಿ) ಅಧ್ಯಕ್ಷರಾಗಿ ಡಾ. ವೈ.ಸಿ. ಯೋಗಾನಂದ ರೆಡ್ಡಿ ಚುನಾಯಿತರಾಗಿದ್ದಾರೆ. ಉಪಾಧ್ಯಕ್ಷರಾಗಿ ಡಾ. ಕೆ. ರವಿ ಆಯ್ಕೆಯಾಗಿದ್ದಾರೆ. 

2024–2029 ಅವಧಿಯ ಪದಾಧಿಕಾರಿಗಳ ಆಯ್ಕೆಗಾಗಿ ಜುಲೈ 2ರಂದು ಚುನಾವಣೆ ನಡೆದಿತ್ತು.

ಕಂದಾಯ ವಿಭಾಗವಾರು ಆಯ್ಕೆ: ಕಲಬುರಗಿ ವಿಭಾಗದಿಂದ ಡಾ. ವೈ.ಸಿ. ಯೋಗಾನಂದ ವೈ.ಸಿ., ಡಾ.ಶರಣಬಸಪ್ಪ ಎಸ್. ಕಾರಭಾರಿ, ಡಾ. ಶಾಂತೇಶ್ ಪಾಟೀಲ, ಬೆಳಗಾವಿ ವಿಭಾಗದಿಂದ ಡಾ.ಸುಧೀರ್ ಆರ್. ಜಂಬಗಿ, ಡಾ.ಪವನಕುಮಾರ ಎನ್. ಪಾಟೀಲ, ಡಾ.ಸೊರಗಾವಿ ವೆಂಕಟೇಶ ರಾಮಪ್ಪ, ಬೆಂಗಳೂರು ವಿಭಾಗದಿಂದ ಡಾ. ಎನ್‌. ರವಿ, ಡಾ. ಟಿ.ಎ. ವೀರಭದ್ರಯ್ಯ, ಡಾ.ಆರ್. ರವೀಂದ್ರ, ಮೈಸೂರು ವಿಭಾಗದಿಂದ ಡಾ. ಹೊನ್ನೇಗೌಡ, ಡಾ. ರವಿ ಕೃಷ್ಣಪ್ಪ ಹಾಗೂ ಡಾ. ರವೀಂದ್ರ ಎಚ್.ಎನ್. ಚುನಾಯಿತರಾಗಿದ್ದಾರೆ. 

ನಾಲ್ಕು ವಿಭಾಗಗಳಿಂದ ಡಾ.ಶಿವಾನಂದ ಎಸ್. ಭೀಮಳ್ಳಿ, ಡಾ. ಸಂತೋಷ ಡಿ. ಪಾಟೀಲ, ಡಾ. ಚೈತ್ರ ವಿ. ಆನಂದ್, ಡಾ. ಡಿ. ಭರತ್ ಕುಮಾರ್ ನಾಮನಿರ್ದೇಶಿತ ಸದಸ್ಯರಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT