ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತಮ್ಮನ ಕೊಲೆ: ಅಣ್ಣನ ಬಂಧನ

Published 9 ಆಗಸ್ಟ್ 2024, 16:20 IST
Last Updated 9 ಆಗಸ್ಟ್ 2024, 16:20 IST
ಅಕ್ಷರ ಗಾತ್ರ

ಬೆಂಗಳೂರು: ಅಣ್ಣನೇ ತಮ್ಮನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದು, ಆರೋಪಿಯನ್ನು ಬೇಗೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಲಕ್ಷ್ಮಿಲೇಔಟ್ ನಿವಾಸಿ ಪ್ರತಾಪ್‌ (19) ಕೊಲೆಯಾದ ವ್ಯಕ್ತಿ. ಕೊಲೆಯಾದ ವ್ಯಕ್ತಿಯ ಅಣ್ಣ ರಜನಿ(23) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

‘ಸಹೋದರರಿಬ್ಬರು ಕಾರು ಮತ್ತು ದ್ವಿಚಕ್ರ ವಾಹನಗಳ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದರು. ಪ್ರತಾಪನಿಗೆ ಮದ್ಯ ಸೇವನೆಯ ಅಭ್ಯಾಸ ಇತ್ತು. ಅಲ್ಲದೇ ಕೆಲಸಕ್ಕೂ ತೆರಳುತ್ತಿರಲಿಲ್ಲ. ಈ ವಿಚಾರ ಅಣ್ಣನಿಗೆ ಸಿಟ್ಟು ತರಿಸಿತ್ತು. ಮನೆಗೆ ಬಂದಿದ್ದ ರಜನಿ, ಪ್ರತಾಪ್‌ನನ್ನು ಕಂಡು ‘ಬಹಳ ದಿನಗಳಿಂದ ಮನೆಯಲ್ಲೇ ಇದ್ದೀಯಾ. ಕೆಲಸಕ್ಕೂ ಹೋಗುತ್ತಿಲ್ಲ. ತಂದೆ– ತಾಯಿ ಮತ್ತು ನಾನು ಮಾತ್ರ ದುಡಿಯಬೇಕೆ ಎಂದು ಪ್ರಶ್ನಿಸಿ, ಜಗಳ ಮಾಡಿದ್ದ. ಗಲಾಟೆ ವಿಕೋಪಕ್ಕೆ ಹೋಗಿ ತಮ್ಮನ ಮೇಲೆ ಹಲ್ಲೆ ನಡೆಸಿ ನಂತರ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ’ ಎಂದು ಪೊಲೀಸರು ಹೇಳಿದರು

ಬೇಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT