ಬೆಂಗಳೂರು: ತಾಂತ್ರಿಕ ದೋಷದಿಂದ ಗುರುವಾರ ಮಲ್ಲೇಶ್ ಪಾಳ್ಯದ ಅಪಾರ್ಟ್ಮೆಂಟ್ ಮೇಲೆ ಬಿದ್ದಿದ್ದ ಹೆಲಿಕಾಪ್ಟರ್ ಅನ್ನು ಎಚ್ಎಎಲ್ ಸಿಬ್ಬಂದಿ ಶುಕ್ರವಾರ ತೆರವುಗೊಳಿಸಿದರು.

ನಾಗರಿಕ ವಿಮಾನ ಇಲಾಖೆಯ ಮಹಾನಿರ್ದೇಶಕರು(ಡಿಜಿಸಿಎ) ಹಾಗೂ ಎಚ್ಎಎಲ್ನ ರೋಟರಿ ವಿಂಗ್ನ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸುಮಾರು 700 ಕೆ.ಜಿ ತೂಕದ ಹೆಲಿಕಾಪ್ಟರ್ನ ಕೆಲ ಭಾಗಗಳನ್ನು ಬಿಡಿಸಿ ನಂತರ ಕ್ರೇನ್ ಮೂಲಕ ಕೆಳಗಿಳಿಸಲಾಯಿತು. ಆದರೆ ಕ್ರೇನ್ನಲ್ಲಿ ತೈಲ ಸೋರಿಕೆ ಉಂಟಾಗಿದ್ದರಿಂದ ಎರಡು ಗಂಟೆ ಕಾಲ ಕಾರ್ಯಾಚರಣೆ ವಿಳಂಬವಾಯಿತು ಎಂದು ಬೈಯಪ್ಪನಹಳ್ಳಿ ಠಾಣೆ ಪೊಲೀಸರು ತಿಳಿಸಿದರು.

ಎಚ್ಎಲ್ನ ಅಧ್ಯಕ್ಷ ಸೌಂದರ್ರಾಜನ್ ಅವರ ಮಾರ್ಗದರ್ಶನದಲ್ಲಿ 30 ಎಚ್ಎಎಲ್ ಸಿಬ್ಬಂದಿ, 10 ಅಗ್ನಿಶಾಮಕ ಠಾಣೆ ಸಿಬ್ಬಂದಿ ಐದು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿದರು. ನಂತರ ಎರಡು ಲಾರಿಗಳಲ್ಲಿ ಹೆಲಿಕಾಪ್ಟರ್ನ ಬಿಡಿ ಭಾಗಗಳನ್ನು ತೆಗೆದುಕೊಂಡು ಎಚ್ಎಎಲ್ಗೆ ಸಾಗಿಸಲಾಯಿತು ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.