ಬೆಂಗಳೂರು: ಕರಗಪುರದ ಭಾರತೀಯ ತಾಂತ್ರಿಕ ಸಂಸ್ಥೆಯ (ಐಐಟಿ) ಹಳೆಯ ವಿದ್ಯಾರ್ಥಿಗಳ ಸಂಘವು ಇದೇ 9,10ರಂದು ನಗರದ ಎಂ.ಎಸ್.ರಾಮಯ್ಯ ತಾಂತ್ರಿಕ ಸಂಸ್ಥೆಯಲ್ಲಿ ಎರಡು ದಿನಗಳ ತಾಂತ್ರಿಕ ಕಾರ್ಯಾಗಾರವನ್ನು ಏರ್ಪಡಿಸಲಿದೆ.

ದೇಶದಾದ್ಯಂತ `ಕ್ಷಿತಿಜ~ ಎಂಬ ರಾಷ್ಟ್ರೀಯ ತಾಂತ್ರಿಕ ಮೇಳವನ್ನು ಪ್ರತಿವರ್ಷ ನಡೆಸುತ್ತಿರುವ ಐಐಟಿ ಈ ಸಂಘವು ರೂ 60 ಲಕ್ಷ ಬಹುಮಾನವನ್ನು ವಿಜೇತ ತಂಡಗಳಿಗೆ ನೀಡುತ್ತಿದೆ. `ಕ್ಷಿತಿಜ~ ಕಾರ್ಯಕ್ರಮದ 9ನೇ ಆವೃತ್ತಿ 2012ರ ಜನವರಿ 27ರಿಂದ 30ರವರೆಗೆ ನಡೆಯಲಿದೆ. ಅದಕ್ಕೆ ಪೂರ್ವಭಾವಿಯಾಗಿ ವಿವಿಧ ತಾಂತ್ರಿಕ ವಿಷಯಗಳ ಕುರಿತು ದೇಶದಾದ್ಯಂತ ಕಾರ್ಯಾಗಾರಗಳನ್ನು ನಡೆಸುತ್ತಿದ್ದು, ಈ ಬಾರಿ ನಗರದ ಎಂ.ಎಸ್.ರಾಮಯ್ಯ ತಾಂತ್ರಿಕ ಸಂಸ್ಥೆಯನ್ನು ಕಾರ್ಯಾಗಾರಕ್ಕೆ ಆಯ್ಕೆ ಮಾಡಿಕೊಂಡಿದೆ.

ಗ್ರಾಮೀಣ ವಿದ್ಯಾರ್ಥಿಗಳನ್ನು ಗಮನದಲ್ಲಿ ಇಟ್ಟುಕೊಂಡು ಹಲವು ಕಾರ್ಯಕ್ರಮಗಳನ್ನು ರೂಪಿಸುತ್ತಿರುವ ಐಐಟಿ `ಕ್ಷಿತಿಜ~ವು, ಅದೇ ಉದ್ದೇಶದಿಂದ ಐ3 ಇಂಡ್ಯಾ ಟೆಕ್ನಾಲಜೀಸ್ ಸಂಸ್ಥೆಯ ಸಹಯೋಗದಲ್ಲಿ ಹ್ಯಾಕಿಂಗ್ (ಬೇರೆಯವರ ಕಂಪ್ಯೂಟರ್‌ನಲ್ಲಿ ಕನ್ನ ಹಾಕುವುದು) ಸಮಸ್ಯೆಯನ್ನು ಮುಖ್ಯವಾಗಿ ಇಟ್ಟುಕೊಂಡು ಭಾರತದ ಭದ್ರತಾ ಕ್ರಮಗಳ ಬಗ್ಗೆ ಚರ್ಚೆ ನಡೆಸಲಿದೆ.

ಅ.9 ಮತ್ತು 10ರಂದು ನಡೆಯಲಿರುವ ಈ ಕಾರ್ಯಾಗಾರದಲ್ಲಿ 120 ವಿದ್ಯಾರ್ಥಿಗಳು ಭಾಗವಹಿಸಬಹುದು. ಯಾವುದೇ ಪ್ರವೇಶ ಶುಲ್ಕ ಇಲ್ಲ. ಆಸಕ್ತರು ಡಿಡಿಡಿ.ಚ್ಚಠಿಟ್ಞ.ಠ್ಜಿ.ಜ್ಞಿ ವೆಬ್‌ಸೈಟ್‌ನಲ್ಲಿರುವ ಪ್ರಶ್ನೆಗಳಿಗೆ ಉತ್ತರಿಸಬೇಕು. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಬಹುದು.

ಮೂರು ಮಂದಿ ವಿದ್ಯಾರ್ಥಿಗಳನ್ನೊಳಗೊಂಡ ತಂಡವು ದೇಶದ 9 ವಲಯಳಿಂದ ಬರುವ ತಂಡಗಳೊಂದಿಗೆ ಹ್ಯಾಕಿಂಗ್‌ನಲ್ಲಿ ಸ್ಪರ್ಧಿಸಬೇಕು. ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ರೂ 45 ಸಾವಿರ ಬಹುಮಾನ ದೊರೆಯಲಿದೆ.
ಇದರಲ್ಲಿ 4 ತಂಡಗಳನ್ನು ಆಯ್ಕೆ ಮಾಡಲಿದ್ದು, 2012ರಲ್ಲಿ ಕರಗಪುರ ಐಐಟಿಯಲ್ಲಿ ಜರುಗುವ ರಾಷ್ಟ್ರೀಯ ಹ್ಯಾಕಿಂಗ್ ಸ್ಪರ್ಧೆಯಲ್ಲಿ ಆ ತಂಡಗಳು ಭಾಗವಹಿಸಬಹುದು ಎಂದು ಐಐಟಿ ಕರಗಪುರದ ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯ ಅನಿಕೇತ್ ರಂಜನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.