ಬೆಂಗಳೂರು: ನಗರದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಮುಂದಾಗಿರುವ ಜಲಮಂಡಳಿ ಹೆಚ್ಚು ನೀರಿನ ಪೂರೈಕೆ ಇರುವ ದಕ್ಷಿಣ ಮತ್ತು ಪಶ್ಚಿಮ ವಿಭಾಗಕ್ಕೆ ನೀರು ಕಡಿತಗೊಳಿಸಿ ಅದನ್ನು ನೀರಿನ ಕೊರತೆ ತೀವ್ರವಾಗಿರುವ ಪ್ರದೇಶಗಳಿಗೆ ನೀಡಲು ನಿರ್ಧರಿಸಿದೆ.

ಸಮಾನ ರೀತಿಯಲ್ಲಿ ನೀರು ಹಂಚಿಕೆ ಮಾಡಲು ಅನುಕೂಲವಾಗುವಂತೆ ವಿತರಣಾ ಕೇಂದ್ರಗಳ ಎಲ್ಲ ವಾಲ್ವ್ಗಳನ್ನು ತೆರೆದಿಡಬೇಕು ಎಂದು ಎಂಜಿನಿಯರ್ಗಳಿಗೆ ಮಾ. 6ರಂದು ಸುತ್ತೋಲೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ. ನೀರು ಹಂಚಿಕೆಯಲ್ಲಿ ಭಾರಿ ಅಸಮಾನತೆ ಇದೆ ಎಂದು ಗೊತ್ತಾಗಿದೆ.

ನಗರದ ದಕ್ಷಿಣ, ಆಗ್ನೇಯ, ಪಶ್ಚಿಮ ಮತ್ತು ಕೇಂದ್ರ ವಿಭಾಗಗಳಲ್ಲಿ ದಿನ ಬಿಟ್ಟು ದಿನ ಸರಾಸರಿ ಆರರಿಂದ ಹದಿನೆಂಟು ಗಂಟೆಗಳ ಕಾಲ ನೀರು ಪೂರೈಕೆಯಾಗುತ್ತಿದೆ. ಆದರೆ ಪೂರ್ವ ಮತ್ತು ಉತ್ತರ ವಿಭಾಗದಲ್ಲಿ ವಾರಕ್ಕೆ ಒಂದು ಸಾರಿ ಕೆಲವೇ ತಾಸುಗಳ ಕಾಲ ನೀರು ಪೂರೈಕೆ ಮಾಡಲಾಗುತ್ತಿದೆ. ಅತಿ ಗಣ್ಯ ವ್ಯಕ್ತಿಗಳು ಇರುವ ಪ್ರದೇಶಗಳಿಗೆ ಇಪ್ಪತ್ತರಿಂದ ಇಪ್ಪತ್ತೆರಡು ಗಂಟೆ ನೀರು ಪೂರೈಕೆಯಾಗುತ್ತಿದೆ ಎಂದು ಜಲಮಂಡಳಿ ಮೂಲಗಳು ತಿಳಿಸಿವೆ.

ಒಟ್ಟು ಆರು ಲಕ್ಷ ಸಂಪರ್ಕಕ್ಕೆ ಜಲಮಂಡಳಿ 390ರಿಂದ 400 ಮಿಲಿಯನ್ ಲೀಟರ್ ನೀರು ಪೂರೈಕೆ ಮಾಡುತ್ತಿದೆ. 50.811 ಸಂಪರ್ಕ ಇರುವ ಕೇಂದ್ರ ವಿಭಾಗಕ್ಕೆ 30.38 ಮಿ.ಲೀ, 94,468 ಸಂಪರ್ಕವಿರುವ ಉತ್ತರ ವಿಭಾಗಕ್ಕೆ 56.38 ಮಿ.ಲೀ, 1,58,141 ಸಂಪರ್ಕ ಇರುವ ಪಶ್ಚಿಮ ವಿಭಾಗಕ್ಕೆ 107.5 ಮಿ.ಲೀ, 85,841 ಸಂಪರ್ಕ ಇರುವ ಪೂರ್ವ ವಿಭಾಗಕ್ಕೆ 41.47 ಮಿ.ಲೀ, 1.35,157 ಸಂಪರ್ಕ ಇರುವ ದಕ್ಷಿಣ ವಿಭಾಗಕ್ಕೆ 103.37 ಮಿ.ಲೀ ಮತ್ತು 71,752 ಸಂಪರ್ಕ ಇರುವ ಆಗ್ನೇಯ ವಿಭಾಗಕ್ಕೆ 51.4 ಮಿ.ಲೀ ನೀರು ಪೂರೈಕೆ ಮಾಡಲಾಗುತ್ತಿದೆ.

ಬನಶಂಕರಿ ಎರಡನೇ ಹಂತಕ್ಕೆ ಬೆಳಿಗ್ಗೆ ಆರು ಗಂಟೆಯಿಂದ ಸಂಜೆ ಆರು ಗಂಟೆವರೆಗೆ ನೀರು ಪೂರೈಕೆ ಆಗುತ್ತಿದೆ. ಮಂಜುನಾಥನಗರ, ರಂಗಯ್ಯಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಬೆಳಿಗ್ಗೆ ಏಳು ಗಂಟೆಯಿಂದ ರಾತ್ರಿ ಹನ್ನೊಂದು ಗಂಟೆವರೆಗೆ ನೀರು ಪೂರೈಸಲಾಗುತ್ತಿದೆ. ಪ್ರಗತಿಪುರ, ವಿವೇಕಾನಂದ ಕಾಲೊನಿಗೆ ಬೆಳಿಗ್ಗೆ ಆರು ಗಂಟೆಯಿಂದ ರಾತ್ರಿ ಹನ್ನೊಂದು ಗಂಟೆವರೆಗೆ ನೀರು ಪೂರೈಕೆ ಆಗುತ್ತಿದೆ.

ಬಿಟಿಎಂ ಲೇಔಟ್ನ ಹಲವು ಪ್ರದೇಶಗಳಿಗೆ ಆರರಿಂದ ಎಂಟು ಗಂಟೆಗಳ ಕಾಲ ನೀರು ಸಿಗುತ್ತಿದೆ. ಬಸನವಗುಡಿ, ಸೀತಾರಾಮ ಮಂದಿರ ರಸ್ತೆ, ಸಾಕಮ್ಮ ಗಾರ್ಡನ್ನಲ್ಲಿ ರಾತ್ರಿ ಎಂಟು ಗಂಟೆಯಿಂದ ಬೆಳಿಗ್ಗೆ ಆರರವರೆಗೆ ನೀರು ಬಿಡಲಾಗುತ್ತಿದೆ.

ಜೆ.ಪಿ.ನಗರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಮಧ್ಯಾಹ್ನ ಹನ್ನೆರಡರಿಂದ ಬೆಳಿಗ್ಗೆ ಆರರವರೆಗೆ ನೀರು ಪೂರೈಕೆ ಆಗುತ್ತಿದೆ ಎಂದು ಜಲಮಂಡಳಿಯ ನೀರು ವಿತರಣಾ ದಾಖಲೆ ಹೇಳುತ್ತದೆ.

ಇದಕ್ಕೆ ವಿರುದ್ಧವಾಗಿ ಬೆಂಗಳೂರು ಉತ್ತರ ಮತ್ತು ಪೂರ್ವ ವಿಭಾಗದ ಭಾಗಗಳ ಬಡಾವಣೆಗಳಲ್ಲಿ ವಾರಕ್ಕೆ ಒಮ್ಮೆ ನೀರು ಪೂರೈಕೆಯಾಗುತ್ತಿದೆ. ಫ್ರೇಜರ್ಟೌನ್ ಮತ್ತು ಪಿಳ್ಳಣ್ಣ ಗಾರ್ಡನ್ಗೆ ಕನಿಷ್ಠ ನೀರು ಪೂರೈಕೆ ಆಗುತ್ತಿದೆ.
`ಹೆಚ್ಚು ನೀರು ಪೂರೈಕೆಯಾಗುತ್ತಿರುವ ಪ್ರದೇಶಗಳಿಗೆ ನೀರು ಪೂರೈಕೆ ಕಡಿಮೆ ಮಾಡಲು ಯತ್ನಿಸಲಾಗುತ್ತಿದೆ.

ದಕ್ಷಿಣ ಭಾಗದಲ್ಲಿ ನೀರು ಸಂಗ್ರಹಣೆಗೆ ಯಾವುದೇ ರೀತಿಯ ವ್ಯವಸ್ಥೆ ಇಲ್ಲದ ಕಾರಣ ನೇರವಾಗಿ ಪೂರೈಸಲಾಗುತ್ತಿದೆ. ಇದರಿಂದಾಗಿ ಅಲ್ಲಿನ ಜನರಿಗೆ ಹೆಚ್ಚು ನೀರು ಲಭ್ಯವಾಗುತ್ತಿದೆ. ಆದರೆ ಸಮವಾಗಿ ನೀರು ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ~ ಎಂದು ಜಲಮಂಡಳಿ ಮುಖ್ಯ ಎಂಜಿನಿಯರ್ ಟಿ.ವೆಂಕಟರಾಜು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.