ಬೆಂಗಳೂರು: ‘ಮಠ, ಮಂದಿರಗಳನ್ನು ಕಟ್ಟುವುದರ ಮೂಲಕ ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡುವುದರ ಜೊತೆಗೆ ಎಲ್ಲರನ್ನು ಧಾರ್ಮಿಕ ಚಿಂತನೆಗಳತ್ತ ತೆಗೆದುಕೊಂಡು ಹೋಗುವ ಕೆಲಸ ಆಗಬೇಕಿದೆ’ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಹೇಳಿದರು.

ಕೊಡಿಗೇಹಳ್ಳಿ ಸಮೀಪದ ಕನ್ನಲ್ಲಿಯಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀಮಹಂತರ ಮಠ ಹಾಗೂ ವಿರೂಪಾಕ್ಷೇಶ್ವರ ದೇವರ ಕಟ್ಟಡವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಸಮಾಜದಲ್ಲಿ ಶಾಂತಿ ನೆಲೆಸಬೇಕಾದರೆ ಮಠ, ದೇವಸ್ಥಾನಗಳಿಂದ ಸಾಧ್ಯ. ಜನರು ನಿತ್ಯ ದೇವರ ದರ್ಶನ ಪಡೆದು, ಗುರು ಹಿರಿಯರನ್ನು ಸ್ಮರಣೆ ಮಾಡಬೇಕು. ಆಗ ಶಾಂತಿ, ನೆಮ್ಮದಿ ಸಿಗುತ್ತದೆ’ ಎಂದರು.

ಶಾಸಕ ಎಸ್.ಟಿ.ಸೋಮಶೇಖರ್ ಮಾತನಾಡಿ, ‘ಹಲವು ತಲೆಮಾರುಗಳಿಂದ ಕೆಲ ಮಠಗಳು ಉಚಿತ ಅನ್ನದಾಸೋಹದ ಮೂಲಕ ಸಮಾಜದ ಕಟ್ಟೆಕಡೆಯ ವ್ಯಕ್ತಿಗೂ ಶಿಕ್ಷಣ ಒದಗಿಸುವ ಕೆಲಸ ಮಾಡುತ್ತಿವೆ. ಆ ಮೂಲಕ ತಳಸಮುದಾಯದವರನ್ನು ಸಮಾಜದ ಮುಖ್ಯವಾಹಿನಿಗೆ ತಂದ ಶ್ರೇಯ ಅವುಗಳಿಗೆ ಸಲ್ಲುತ್ತದೆ’ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಶಾಂತರಾಜು ಮಾತನಾಡಿ, ‘ಸಂಸ್ಕಾರ, ಸಹಬಾಳ್ವೆ, ಮಾನವೀಯ ಮೌಲ್ಯಗಳನ್ನು ಕಲಿಸುವ ಕೆಲಸವನ್ನು ಮಠಗಳು ಮಾಡುತ್ತಿವೆ. ಆ ಮೂಲಕ ರಾಷ್ಟ್ರ ಕಟ್ಟುವ ಕಾರ್ಯದಲ್ಲಿ ಭಾಗಿಯಾಗಿವೆ’ ಎಂದು ಹೇಳಿದರು.

ಸಮಾಜ ಸೇವಕ ಎನ್.ನಂಜುಂಡೇಶ್ ಮಾತನಾಡಿ, ‘ಕನ್ನಲ್ಲಿ ಮಹಂತರ ಮಠಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಮಠ ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡರೆ ಎಲ್ಲ ರೀತಿಯ ಸಹಕಾರವನ್ನು ದಾನಿಗಳಿಂದ ದೊರಕಿಸಿಕೊಡಲಾಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.