ಬೆಂಗಳೂರು: ಮದುವೆಗೆ ನಿರಾಕರಿಸಿದ ನಾದಿನಿಯನ್ನು ಚಾಕುವಿನಿಂದ ಇರಿದ ವ್ಯಕ್ತಿ ನಂತರ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಸುಂಕದಕಟ್ಟೆ ಬಳಿಯ ಪೈಪ್‌ಲೈನ್ ರಸ್ತೆಯಲ್ಲಿ ಗುರುವಾರ ನಡೆದಿದೆ.

ಹಲ್ಲೆಗೊಳಗಾದ ಕವಿತಾ (21) ಮತ್ತು ಆತ್ಮಹತ್ಯೆಗೆ ಯತ್ನಿಸಿದ ವರದ ರಾಜು (28) ಎಂಬುವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಕ್ಕ ವಿನುತಾ ಮತ್ತು ತಮ್ಮ ಮಂಜುನಾಥ್ ಜತೆ ಸುಂಕದಕಟ್ಟೆಯ ಶ್ರೀನಿವಾಸನಗರದಲ್ಲಿ ವಾಸವಿರುವ ಕವಿತಾ, ಮನೆಯ ಸಮೀಪದ ಮ್ಯಾಕ್ಸ್ ಅಪೆರಲ್ಸ್ ಸಿದ್ಧ ಉಡುಪು ಕಾರ್ಖಾ ನೆಯ ಉದ್ಯೋಗಿಯಾಗಿದ್ದಾರೆ.

ಅವರ ಮತ್ತೊಬ್ಬ ಅಕ್ಕ ಸವಿತಾ ಅವರು ಪತಿ ವರದರಾಜು ಜತೆ ಸುಂಕದಕಟ್ಟೆಯಲ್ಲಿ ವಾಸವಾಗಿದ್ದಾರೆ. ಎರಡು ವರ್ಷದ ಹಿಂದೆ ಮದುವೆ ಯಾಗಿರುವ ಅವರಿಗೆ ಒಂದು ವರ್ಷದ ಮಗುವಿದೆ. ವರದರಾಜು ತನ್ನನ್ನು ಮದುವೆ ಯಾಗುವಂತೆ ಕವಿತಾ ಅವರನ್ನು ಪೀಡಿಸುತ್ತಿದ್ದ. ಆದರೆ, ಅವರು ಇದಕ್ಕೆ ಒಪ್ಪಿರಲಿಲ್ಲ. ಇದರಿಂದ ಕೋಪ ಗೊಂಡಿದ್ದ ಆತ, ಕವಿತಾ ಅವರು ಬೆಳಿಗ್ಗೆ ಕೆಲಸಕ್ಕೆ ನಡೆದು ಹೋಗುತ್ತಿದ್ದಾಗ ಹಿಂಬಾಲಿಸಿ ಬಂದು ಅಡ್ಡಗಟ್ಟಿದ್ದಾನೆ.

ನಂತರ ಅವರ ಕುತ್ತಿಗೆ ಭಾಗಕ್ಕೆ ಎರಡು ಬಾರಿ ಚಾಕುವಿನಿಂದ ಇರಿದು, ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ವೇಳೆ ಕವಿತಾ ಅವರ ಚೀರಾಟ ಕೇಳಿ ಸ್ಥಳಕ್ಕೆ ಬಂದ ಸಾರ್ವಜನಿಕರು ಆತನಿಗೆ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಆ ನಂತರ ಪೊಲೀಸರು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.