ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನ್ಯಾಕ್’ ಹೆಸರಿನಲ್ಲಿ ನಕಲಿ ಪ್ರಮಾಣ ಪತ್ರ

ಮುಂಬೈನ ‘ವಿ ಮೇಕ್ ಡ್ರೀಮ್ ಇಂಡಿಯಾ’ ಕಂಪನಿ ವಿರುದ್ಧ ಎಫ್‌ಐಆರ್
Last Updated 15 ಡಿಸೆಂಬರ್ 2018, 19:33 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಹಲವು ಕಾಲೇಜುಗಳ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಪರಿಷತ್ (ನ್ಯಾಕ್) ಹೆಸರಿನಲ್ಲಿ ನಕಲಿ ಪ್ರಮಾಣ ಪತ್ರಗಳನ್ನು ವಿತರಿಸಿದ ಆರೋಪದ ಮೇಲೆ ಮುಂಬೈನ ಕಂಪನಿಯೊಂದರ ವಿರುದ್ಧ ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ವಿ ಮೇಕ್ ಡ್ರೀಮ್ ಇಂಡಿಯಾ’ ಕಂಪನಿಯು ನಕಲಿ ಪ್ರಮಾಣ ಪತ್ರ ನೀಡಿರುವುದಾಗಿ ನ್ಯಾಕ್‌ ಸಂಸ್ಥೆಯ ಅಡಳಿತಾಧಿಕಾರಿ ಎಂ. ಅರುಣ್ ಡಿ.10ರಂದು ದೂರು ನೀಡಿದ್ದಾರೆ. ‌‘ಕಂಪನಿಯ ಮುಖ್ಯಕಚೇರಿ ಮುಂಬೈನಲ್ಲಿದ್ದು, ಅದರ ಘಟಕ ಬೆಂಗಳೂರಿನಲ್ಲಿದೆ. ಇಲ್ಲಿಯ ಪ್ರತಿನಿಧಿಗಳೇ ನಕಲಿ ಪ್ರಮಾಣ ವಿತರಿಸಿರಿವುದು ಗೊತ್ತಾಗಿದೆ’ ಎಂದು ಜ್ಞಾನಭಾರತಿ ಪೊಲೀಸರು ಹೇಳಿದ್ದಾರೆ.

ದೂರಿನ ವಿವರ: ‘ದೇಶದ ಉನ್ನತ ಶಿಕ್ಷಣ ಸಂಸ್ಥೆಗಳ ಮೌಲ್ಯಮಾಪನ ಮತ್ತು ಮಾನ್ಯತೆ ನಿರ್ಧರಿಸುವ ಕೆಲಸವನ್ನು ನ್ಯಾಕ್ ಸಂಸ್ಥೆ ಮಾಡುತ್ತಿದೆ. ಬೆಂಗಳೂರಿನಲ್ಲಿ ಸಂಸ್ಥೆಯ ಘಟಕವಿದೆ’ ಎಂದು ಎಂ. ಅರುಣ್ ದೂರಿನಲ್ಲಿ ವಿವರಿಸಿದ್ದಾರೆ.

‘ವಿಚಾರ ಸಂಕಿರಣ ನಡೆಸುವ ಸಂಬಂಧ ‘ವಿ ಮೇಕ್ ಡ್ರೀಮ್ ಇಂಡಿಯಾ’ ಕಂಪನಿಯು ನ್ಯಾಕ್‌ನಿಂದ ಯಾವುದೇ ಅನುಮತಿ ಪಡೆದಿಲ್ಲ. ಅಷ್ಟಾದರೂ ಜಾಹೀರಾತು ನೀಡಿದ್ದ ಕಂಪನಿ,‌‌ ನ್ಯಾಕ್‌ ಪ್ರಮಾಣ ಪತ್ರ ನೀಡುವುದಾಗಿ ಹೇಳಿತ್ತು. ಅದನ್ನು ನಂಬಿ ವಿದ್ಯಾರ್ಥಿಗಳು, ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದರು. ನ್ಯಾಕ್‌ ಸಂಸ್ಥೆಯ ನಿರ್ದೇಶಕರ ನಕಲಿ ಸಹಿ ಇರುವ ಪ್ರಮಾಣ ಪತ್ರಗಳನ್ನು ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಗಿದೆ’ ಎಂದು ಅರುಣ್‌ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT