ಬೆಂಗಳೂರು: ಪ್ರತಿ ವಾರ್ಡ್ನಲ್ಲಿ ಆರ್ಥಿಕವಾಗಿ ಹಿಂದುಳಿದ ಅರ್ಹ ನೂರು ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಜಾರಿಗೊಳಿಸುವುದು ಹೇಗೆ ಎಂಬ ಜಿಜ್ಞಾಸೆ ಬುಧವಾರ ನಡೆದ ಪಾಲಿಕೆ ಸಭೆಯಲ್ಲಿ ಆಡಳಿತಾರೂಢ ಬಿಜೆಪಿ ಸದಸ್ಯರನ್ನೇ ಕಾಡಿತು.

2012-13ನೇ ಸಾಲಿನ ಬಜೆಟ್ ಮೇಲಿನ ಮುಂದುವರಿದ ಚರ್ಚೆಯ ಮಧ್ಯೆ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಸದಸ್ಯ ಬಿ.ಎಸ್. ಸತ್ಯನಾರಾಯಣ, `ಬಡವರಿಗೆ ಅಡುಗೆ ಅನಿಲ ಸಂಪರ್ಕ ಕಲ್ಪಿಸಿದಲ್ಲಿ ಬಿಪಿಎಲ್ ಪಡಿತರ ಚೀಟಿಗಳಿಂದ ವಂಚಿತರಾಗಲಿದ್ದಾರೆ. ಹೀಗಾಗಿ, ಯಾವ ರೀತಿ ಯೋಜನೆಯನ್ನು ಅನುಷ್ಠಾನಗೊಳಿಸಬೇಕು ಎಂಬ ಬಗ್ಗೆ ಯೋಚನೆ ಮಾಡಿ ನಿರ್ಧಾರ ಕೈಗೊಳ್ಳಬೇಕು~ ಎಂದು ಒತ್ತಾಯಿಸಿದರು.

ಹಾಗಾದರೆ, `ಎಪಿಎಲ್ ಕಾರ್ಡ್ ಹೊಂದಿರುವವರಿಗೆ ಅಡುಗೆ ಅನಿಲ ಸಂಪರ್ಕ ಕಲ್ಪಿಸೋಣ~ ಎಂದು ಮೇಯರ್ ಡಿ. ವೆಂಕಟೇಶಮೂರ್ತಿ ಹೇಳಿದಾಗ ಸಭೆ ನಗೆಗಡಲಲ್ಲಿ ಮುಳುಗಿತು.

ಈ ನಡುವೆ, ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಾತ್ರ ಪರಿಶಿಷ್ಟರಿಗೆ ಶೇ 22:75ರ ಅನುದಾನದಡಿ ಸೋಲಾರ್ ಹೀಟರ್ ಹಾಗೂ ದೀಪಗಳನ್ನು ವಿತರಿಸಲಾಗುತ್ತಿದ್ದು, ಇದನ್ನು ಇನ್ನುಳಿದ 27 ವಿಧಾನಸಭಾ ಕ್ಷೇತ್ರಗಳಿಗೂ ವಿಸ್ತರಿಸುವಂತೆ ಬಿಜೆಪಿ ಹಿರಿಯ ಸದಸ್ಯ ಗಂಗಬೈರಯ್ಯ ಒತ್ತಾಯಿಸಿದರು.

ಅಲ್ಲದೆ, ಆಟೋರಿಕ್ಷಾ ಚಾಲಕರಿಗೆ ಡಿಜಿಟಲ್ ಮೀಟರ್ ನೀಡುವ ವಿಚಾರದಲ್ಲಿ ಮಾಲೀಕರು ಅಥವಾ ಚಾಲಕರು ಎಂಬ ತಾರತಮ್ಯ ಮಾಡದೆ ಸಹಾಯಧನ ನೀಡಲು ಮುಂದಾಗಬೇಕು ಎಂದು ಅವರು ಸಲಹೆ ಮಾಡಿದರು.
ಪಾಲಿಕೆ ಬಜಾರ್ ನಿರ್ಮಾಣ ಕೈಬಿಡಿ: ಬಜೆಟ್ನಲ್ಲಿ ಪ್ರಸ್ತಾಪಿಸಿರುವ `ಪಾಲಿಕೆ ಬಜಾರ್~ಗಳ ನಿರ್ಮಾಣ ಯೋಜನೆಯನ್ನು ಕೈಬಿಡುವಂತೆಯೂ ಅವರು ಆಗ್ರಹಿಸಿದರು.

ಸಾರ್ವಜನಿಕ ಬಹೂಪಯೋಗಿ ಕಟ್ಟಡ, ಜಯನಗರ ವಾಣಿಜ್ಯ ಸಂಕೀರ್ಣ, ಕೆ.ಆರ್.ಮಾರುಕಟ್ಟೆ, ರಸೆಲ್ ಮಾರುಕಟ್ಟೆಗಳಿಂದಲೇ ಪಾಲಿಕೆಗೆ ನಿರೀಕ್ಷಿತ ವರಮಾನ ಬರುತ್ತಿಲ್ಲ. ಬಿಬಿಎಂಪಿ ಪಾಲಿಗೆ ಮಾರುಕಟ್ಟೆಗಳು ಬಿಳಿ ಆನೆಗಳಾಗಿವೆ. ಹೀಗಾಗಿ, ಪಾಲಿಕೆ ಬಜಾರ್ ನಿರ್ಮಾಣ ಯೋಜನೆ ಪ್ರಸ್ತಾವವನ್ನೂ ಕೈಬಿಡಬೇಕು ಎಂದು ಅವರು ಒತ್ತಾಯಿಸಿದರು.

ಇದಕ್ಕೂ ಮುನ್ನ ಸತತ ಮೂರನೇ ದಿನ ಬಜೆಟ್ ಮೇಲಿನ ಚರ್ಚೆ ಮುಂದುವರಿಸಿದ ವಿರೋಧ ಪಕ್ಷದ ನಾಯಕ ಎಂ.ಕೆ. ಗುಣಶೇಖರ್, `ಅವಾಸ್ತವಿಕ ಬಜೆಟ್ ಅನ್ನು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಗೆ ವಾಪಸು ಕಳಿಸಿ, ವಾಸ್ತವಕ್ಕೆ ಹತ್ತಿರವಾದ ಬಜೆಟ್ ರೂಪಿಸಿ ಮರು ಮಂಡಿಸಲು ಅವಕಾಶ ನೀಡಬೇಕು~ ಎಂದು ಮೇಯರ್ ಅವರನ್ನು ಆಗ್ರಹಿಸಿದರು. `ಇದರಿಂದ ಮೇಯರ್ ಹೊಸ ಇತಿಹಾಸ ನಿರ್ಮಾಣ ಮಾಡಿದಂತಾಗುತ್ತದೆ~ ಎಂದು ಅವರು ಹೇಳಿದರು.

1000 ಕೋಟಿ ಸಂಗ್ರಹ ಅಸಾಧ್ಯ: ಜನತಾದಳ (ಎಸ್) ಗುಂಪಿನ ನಾಯಕ ಟಿ. ತಿಮ್ಮೇಗೌಡ ಮಾತನಾಡಿ, `ಕೇಂದ್ರ ನಗರಾಭಿವೃದ್ಧಿ ಇಲಾಖೆಯ ಮಾರ್ಗಸೂಚಿಯನ್ವಯ ಆರ್ಥಿಕ ನಿರ್ವಹಣೆಯಲ್ಲಿ `ಬಿ ಡಬಲ್ ಪ್ಲಸ್~ ಶ್ರೇಣಿ ಪಡೆದಿರುವ ಬಿಬಿಎಂಪಿಯು ಮುನಿಸಿಪಲ್ ಬಾಂಡ್ಗಳ ಮೂಲಕ ಕೇವಲ 300 ಕೋಟಿ ರೂಪಾಯಿಗಳಷ್ಟೇ ಸಂಗ್ರಹಿಸಲು ಅವಕಾಶವಿದ್ದು, 1000 ಕೋಟಿ ರೂಪಾಯಿ ಸಂಗ್ರಹ ಅಸಾಧ್ಯ~ ಎಂದರು.

`ರಾಜ್ಯ ಸರ್ಕಾರ ಪಾಲಿಕೆಗೆ ನಿರೀಕ್ಷಿಸಿದಷ್ಟು ಅನುದಾನ ಬಿಡುಗಡೆ ಮಾಡುತ್ತಿಲ್ಲ. ಅಲ್ಲದೆ, 13ನೇ ಹಣಕಾಸು ಯೋಜನೆಯಡಿ ವಿವಿಧ ಯೋಜನೆಗಳಿಗೆ 480 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದ್ದರೂ ಯಾವುದೇ ಯೋಜನೆಗಳು ಪ್ರಗತಿಯಾಗುತ್ತಿಲ್ಲ~ ಎಂದು ಆರೋಪಿಸಿದರು.

ವಿಡಿಯೊ ಗೇಮ್ಸಗೆ ಕಡಿವಾಣಕ್ಕೆ ಒತ್ತಾಯ: ನಗರದ ಬಡವರು, ಕೂಲಿ ಕಾರ್ಮಿಕರು ಹಾಗೂ ಶ್ರಮಿಕರ ಬದುಕಿಗೆ ಮಾರಕವಾಗಿರುವ ವಿಡಿಯೊ ಗೇಮ್ಸಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳುವಂತೆ ಬಿಜೆಪಿ ಸದಸ್ಯ ಎ.ಎಚ್. ಬಸವರಾಜು ಒತ್ತಾಯಿಸಿದರು.

ನಗರದಲ್ಲಿ ನಾಯಿಕೊಡೆಗಳಂತೆ ತಲೆಯೆತ್ತಿರುವ ವಿಡಿಯೊ ಗೇಮ್ಸಗಳಿಂದ ಶ್ರಮಿಕರು ಬೆವರು ಸುರಿಸಿ ದುಡಿದ ಹಣವನ್ನೆಲ್ಲಾ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ವಿಡಿಯೊ ಗೇಮ್ಸಗಳಿಗೆ ನೀಡಿರುವ ಪರವಾನಗಿ ರದ್ದುಪಡಿಸಬೇಕು ಎಂದು ಮನವಿ ಮಾಡಿದರು. ಬಸವರಾಜು ಮಾತಿಗೆ ಎಲ್ಲ ಪಕ್ಷಗಳ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸುವ ಮೂಲಕ ಒಕ್ಕೊರಲಿನಿಂದ ಬೆಂಬಲ ಸೂಚಿಸಿದರು.

ಎದ್ದುಕಂಡ ನಿರಾಸಕ್ತಿ
ಬಿಬಿಎಂಪಿಯ 2012-13ನೇ ಸಾಲಿನ ಬಜೆಟ್ ಮೇಲಿನ ಚರ್ಚೆಯಲ್ಲಿ ಬಹಳಷ್ಟು ಸದಸ್ಯರಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಮೇಯರ್ ಡಿ. ವೆಂಕಟೇಶಮೂರ್ತಿ ಬುಧವಾರ ಬೆಳಿಗ್ಗೆ 9 ಗಂಟೆಗೆ ಸಭೆ ಕರೆದರೂ ಬಹಳಷ್ಟು ಸದಸ್ಯರು ಗೈರು ಹಾಜರಾಗುವ ಮೂಲಕ ಚರ್ಚೆಯಲ್ಲಿ ಪಾಲ್ಗೊಳ್ಳಲು ನಿರಾಸಕ್ತಿ ತೋರಿದರು.

ನಿಗದಿತ ಬೆಳಿಗ್ಗೆ 9 ಗಂಟೆ ಬದಲಿಗೆ 9.35ಕ್ಕೆ ಸಭೆ ಆರಂಭವಾದಾಗ ಕೇವಲ 19 ಮಂದಿ ಸದಸ್ಯರಷ್ಟೇ ಪಾಲ್ಗೊಂಡಿದ್ದರು. ಇನ್ನು, ಅಧಿಕಾರಿಗಳ ಸ್ಥಿತಿಯೂ ಇದಕ್ಕಿಂತ ಭಿನ್ನವೇನೂ ಇರಲಿಲ್ಲ. ಸಭೆಯ ಪ್ರಾರಂಭದಲ್ಲಿ ಅನೇಕ ಅಧಿಕಾರಿಗಳ ಗೈರು ಹಾಜರಿ ಕೂಡ ಎದ್ದು ಕಂಡಿತು.

ಬೆಳಿಗ್ಗೆ 11 ಗಂಟೆವರೆಗೆ ಬಹುತೇಕ ಸದಸ್ಯರು ಸಭೆಗೆ ಗೈರು ಹಾಜರಾಗಿದ್ದರಿಂದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಹಿಂದಿನ ಸಾಲಿನ ಕುರ್ಚಿಗಳು ಖಾಲಿ ಖಾಲಿಯಾಗಿದ್ದವು. ಗುರುವಾರ ಬೆಳಿಗ್ಗೆ 11 ಗಂಟೆಗೆ ಸಭೆ ನಡೆಯಲಿದ್ದು, ಬಜೆಟ್ ಮೇಲಿನ ಚರ್ಚೆ ಮುಂದುವರಿಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.