ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಕೆಓ’ ಶಾಲೆಗೆ ರಜೆ: 940 ಮಕ್ಕಳು ಅತಂತ್ರ

ದತ್ತು ಪಡೆದಿದ್ದ ಶಿವಾಜಿನಗರದ ಶಾಲೆಗೆ ರಜೆ
Last Updated 12 ಜೂನ್ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಐಎಂಎ ಸಂಸ್ಥೆಯಿಂದ ಸಾವಿರಾರು ಮಂದಿಗೆ ವಂಚನೆ ಆಗಿರುವ ಪ್ರಕರಣದಿಂದ ನೂರಾರು ಮಕ್ಕಳು ಸಹ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಶಿವಾಜಿನಗರದಲ್ಲಿರುವಸರ್ಕಾರದ ‘ವಿಕೆಓ’ ಶಾಲೆಯನ್ನು ಐಎಂಎ ಸಮೂಹ ಸಂಸ್ಥೆಯೇ ದತ್ತು ಪಡೆದಿತ್ತು. ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಂಡಿದ್ದ ಶಿಕ್ಷಕರಿಗೆ ಕಂಪನಿಯೇ ವೇತನ ನೀಡುತ್ತಿತ್ತು. ಈಗ ಆ ಶಾಲೆಗೆ ತಾತ್ಕಾಲಿಕವಾಗಿ ರಜೆ ನೀಡಲಾಗಿದೆ.

ಈ ಶಾಲೆಯಲ್ಲಿ 940 ಮಕ್ಕಳು ಓದುತ್ತಿದ್ದಾರೆ. ಮೂವರು ಸರ್ಕಾರದಿಂದ ನೇಮಕಗೊಂಡ ಶಿಕ್ಷಕರಿದ್ದಾರೆ.ಉಳಿದಂತೆ 70 ಸಿಬ್ಬಂದಿಯನ್ನು ಐಎಂಎ ಸಂಸ್ಥೆಯೇಗುತ್ತಿಗೆ ಆಧಾರದಲ್ಲಿ ನೇಮಿಸಿದ್ದು, ವೇತನವನ್ನೂ ನೀಡುತ್ತಿತ್ತು. ಈಗ ಕಂಪನಿಯೇ ಬಂದ್ ಆಗಿದ್ದು, ಇನ್ನು
ಮುಂದೆ ನಮಗೆ ವೇತನ ನೀಡುವವರು ಯಾರುಎಂದು ಸಿಬ್ಬಂದಿ ಪ್ರಶ್ನಿಸುತ್ತಿದ್ದಾರೆ. ಅದೇ ಕಾರಣಕ್ಕೆ ಅವರು ಶಾಲೆಗೂ ಬಂದಿಲ್ಲ.

‘ಸರ್ಕಾರದ ಜಾಗದಲ್ಲಿರುವ ಶಾಲೆ ಇದಾಗಿದ್ದು,ನಿರ್ವಹಣೆ ಜವಾಬ್ದಾರಿಯನ್ನು ಮಾತ್ರ ಐಎಂಎ ಸಂಸ್ಥೆ ವಹಿಸಿಕೊಂಡಿತ್ತು. ಮುಂದಿನ ತಿಂಗಳಿನಿಂದ ವೇತನ ಸಿಗುವುದಿಲ್ಲವೆಂದು ಭಯಗೊಂಡಿರುವ ಗುತ್ತಿಗೆ ಆಧಾರದ ಶಿಕ್ಷಕರು, ತರಗತಿಯನ್ನೇ ತೆಗೆದುಕೊಳ್ಳು
ತ್ತಿಲ್ಲ. ಇತರೆ ಸಿಬ್ಬಂದಿ, ಸೋಮವಾರದಿಂದ ಶಾಲೆಗೆ ಬಂದಿಲ್ಲ. ಹೀಗಾಗಿ, ರಜೆ ನೀಡಲಾಗಿದೆ’ಎಂದು ಶಾಲಾ ಶಿಕ್ಷಕರು ಹೇಳಿದರು. ಬುಧವಾರ ಹಲವಾರು ಪೋಷಕರು ಶಾಲೆಗೆ ಬಂದಿದ್ದರು. ಮಕ್ಕಳ ಭವಿಷ್ಯದ ಕುರಿತಂತೆ ಬಹಳ ಚಿಂತಿತರಾಗಿದ್ದುದು ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT