ಯಲಹಂಕ: `ಕೃಷಿಯಲ್ಲಿ ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ವಿಷಯುಕ್ತ ಆಹಾರ ಉತ್ಪಾದನೆಯಾಗುತ್ತಿರುವ ಪರಿಣಾಮ ರೋಗರುಜಿನಗಳು ಹೆಚ್ಚಾ ಗುತ್ತಿವೆ. ಸಾವಯವ ಕೃಷಿ ಅಳವಡಿಸಿಕೊಳ್ಳುವುದೇ ಇದಕ್ಕೆ ಪರಿಹಾರ~ ಎಂದು ಶಾಸಕ ಎಸ್.ಆರ್.ವಿಶ್ವನಾಥ್ ಹೇಳಿದರು.

ಕೃಷಿ ಇಲಾಖೆ ಬೆಂಗಳೂರು ಉತ್ತರ ಹಾಗೂ ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರು ಉತ್ತರ ತಾಲ್ಲೂಕು ಸೀತಕೆಂಪನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಸಾವಯವ ಗ್ರಾಮ/ ಸ್ಥಳ ಯೋಜನೆ ಮತ್ತು ಕಾಂಪೋಸ್ಟ್ ಆಂದೋಲನ ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲೆಡೆ ರಸಗೊಬ್ಬರದ ಕೊರತೆ ಎದ್ದು ಕಾಣುತ್ತಿದ್ದು, ನನ್ನ ಕ್ಷೇತ್ರದಲ್ಲಿಯೂ ಸಹ ಗೊಬ್ಬರದ ಕೊರತೆ ಉಂಟಾಗಿದ್ದ ಕಾರಣ ರೈತರು ರಸಗೊಬ್ಬರ ಕೊಡಿಸಬೇಕೆಂದು ಬೇಡಿಕೆ ಇಟ್ಟಿದ್ದರು ಎಂದ ಅವರು, ಈ ದಿಸೆಯಲ್ಲಿ ರೈತರು ಸುಲಭ ರೀತಿಯಲ್ಲಿ ಸಾವಯವ ಗೊಬ್ಬರ ತಯಾರಿಸಿಕೊಂಡು ಕೃಷಿಯಲ್ಲಿ ಸ್ವಾವಲಂಬನೆ ಸಾಧಿಸಬೇಕು ಎಂದು ಸಲಹೆ ನೀಡಿದರು.

ಪ್ರಗತಿಪರ ರೈತ ದೇವನಹಳ್ಳಿಯ ಶಿವನಾಪುರ ರಮೇಶ್ ಮತ್ತು ಸಹಾಯಕ ಕೃಷಿ ನಿರ್ದೇಶಕ ಲಕ್ಷ್ಮಣರೆಡ್ಡಿ ಮಾತನಾಡಿದರು. ತಾ.ಪಂ. ಸದಸ್ಯ ರಾಮಚಂದ್ರಪ್ಪ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕಿ ಶಾರದಮ್ಮ ಮಾರೇಗೌಡ, ಗ್ರಾ.ಪಂ. ಸದಸ್ಯ ಜಯರಾಮಯ್ಯ, ಪುರುಷೋತ್ತಮರಾವ್ ಸಾವಯವ ಕೃಷಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ, ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆಯ ಯೋಜನಾ ನಿರ್ದೇಶಕ ರವಿ ಮೊದಲಾದವರು ಉಪಸ್ಥಿತರಿದ್ದರು. ಆಂದೋಲನದಲ್ಲಿ ವಿವಿಧ ಬಗೆಯ ಸಾವಯವ ಗೊಬ್ಬರಗಳ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.