ಪೀಣ್ಯ ದಾಸರಹಳ್ಳಿ: ದಾಸರಹಳ್ಳಿ ಬಿಬಿಎಂಪಿ ವಲಯ ವ್ಯಾಪ್ತಿಯ ಹೋಟೆಲ್, ಬಾರ್ ರೆಸ್ಟೋರೆಂಟ್, ಮೀನು, ಮಾಂಸದ ಮಳಿಗೆಗಳಿಗೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್ ರೆಡ್ಡಿ ನೇತೃತ್ವದ ತಂಡವು ಇತ್ತೀಚೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಸ್ವಚ್ಛತೆ ಕಾಪಾಡದ ಮಳಿಗೆಗಳಿಗೆ ತಕ್ಷಣ ನೋಟಿಸ್ ಜಾರಿಗೊಳಿಸಿದ ತಂಡವು ಬೀಗ ಹಾಕಿಸಿತು. ಹಲವು ಹೋಟೆಲ್ಗಳು ಹಾಗೂ ಮಟನ್ ಮಳಿಗೆಗಳಲ್ಲಿ ಸ್ವಚ್ಛತೆ ಇಲ್ಲದ್ದನ್ನು ಗಮನಿಸಿದ ಸಮಿತಿಯ ಸದಸ್ಯರು ತರಾಟೆಗೆ ತಗೆದುಕೊಂಡರು.

ನಂತರ ಮಲ್ಲಸಂದ್ರ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಹೆರಿಗೆ ಆಸ್ಪತ್ರೆಗೆ ತಂಡವು ಭೇಟಿ ನೀಡಿ ಪರಿಶೀಲನೆ ನಡೆಸಿತು.ಆರೋಗ್ಯ ಸ್ಥಾಯಿ ಸಮಿತಿ ಸದಸ್ಯರಾದ ಎಚ್.ಎನ್. ಗಂಗಾಧರ್, ಡಾ.ಎಸ್.ಎಸ್. ಶಿವಪ್ರಸಾದ್, ನಂದಿನಿ ಶ್ರೀನಿವಾಸ್, ರಾಧಾಕೃಷ್ಣ, ಜಯಪ್ಪರೆಡ್ಡಿ, ನಟರಾಜ್, ಇರ್ಷಾದ್ ಬೇಗಂ, ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.