ಯಲಹಂಕ: ಆಹಾರ ಭದ್ರತಾ ಕಾಯ್ದೆ ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕಾದರೆ ಮತ್ತೊಂದು ಹಸಿರುಕ್ರಾಂತಿಯಾಗಬೇಕಿದೆ ಎಂದು ಎಂ. ಎಸ್.ಸ್ವಾಮಿನಾಥನ್ ಸಂಶೋಧನಾ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಪ್ರೊಫೆಸರ್ ಎಂ.ಎಸ್.ಸ್ವಾಮಿನಾಥನ್ ಹೇಳಿದರು.

ಅಂತರರಾಷ್ಟ್ರೀಯ ವಿಸ್ತರಣಾ ಶಿಕ್ಷಣ ಸಂಘ(ನಾಗಪುರ) ಮತ್ತು ಕೃಷಿ ವಿಶ್ವವಿದ್ಯಾಲಯ ಹಾಗೂ ಭಾರತೀಯ ವಿಸ್ತರಣಾ ಶಿಕ್ಷಣಸಂಘ(ಕರ್ನಾಟಕ ಅಧ್ಯಾಯ)ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿರುವ ‘ಸುಸ್ಥಿರ ಕೃಷಿ ಅಭಿವೃದ್ಧಿಗೆ ವಿಸ್ತರಣಾ ಶಿಕ್ಷಣ ಕಾರ್ಯತಂತ್ರಗಳು–ಒಂದು ಜಾಗತಿಕ ದೃಷ್ಟಿಕೋನ’ ಕುರಿತ ನಾಲ್ಕು ದಿನಗಳ ಅಂತರರಾಷ್ಟ್ರೀಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ 70 ಮಿಲಿಯನ್ ಟನ್ ಆಹಾರಧಾನ್ಯದ ಅವಶ್ಯಕತೆಯಿದ್ದು, ಈಗಿನ ಕೃಷಿ ಪದ್ಧತಿಯನ್ನು ಅನುಸರಿಸಿದರೆ ಆಹಾರ ಭದ್ರತಾ ಕಾಯ್ದೆಯು ಯಶಸ್ವಿಯಾಗಲು ಕಷ್ಟವಾಗುತ್ತದೆ. ಕೇವಲ ಗೋಧಿ, ಭತ್ತ ಬೆಳೆಯಲು ಮಾತ್ರ ಕೃಷಿ ಸೀಮಿತವಾಗಿರದೆ ಬಹುಧಾನ್ಯಗಳನ್ನು ಬೆಳೆಯುವ ಕಡೆಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ ಎಂದರು.

ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಆರ್.ದ್ವಾರಕೀನಾಥ್ ಮಾತನಾಡಿ, ದೇಶದಲ್ಲಿ ಬರಡುಭೂಮಿ ಹೆಚ್ಚಾಗಿದ್ದು, ಇಂತಹ ಭೂಮಿಯಲ್ಲಿ ಕಡಿಮೆ ನೀರನ್ನು ಬಳಸಿ ಹೆಚ್ಚಿನ ಉತ್ಪಾದನೆ ಮಾಡಬೇಕಾದ ಅವಶ್ಯಕತೆಯಿದೆ. ಭಾರತದ ಭವಿಷ್ಯವು ಕೃಷಿ ಚಟುವಟಿಕೆಗಳನ್ನು ಅವಲಂಬಿಸಿದ್ದು, ರೈತರ ಅವಶ್ಯಕತೆ ಗಳನ್ನು ಪೂರೈಸಬೇಕಾದುದು ಸರ್ಕಾರದ ಕರ್ತವ್ಯವಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.