ಶುಕ್ರವಾರ, ಆಗಸ್ಟ್ 19, 2022
27 °C
ವಲಯ ಕಸಾಪ ಅಧ್ಯಕ್ಷ ಬಂಟಿ ರಾಂಪುರೆ ಕಾರ್ಯಕ್ಕೆ ಮೆಚ್ಚುಗೆ

ಖಾತೆಗೆ ಜಮಾ ಆಗಿದ್ದ ₹3 ಲಕ್ಷ ವಾಪಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಮಲನಗರ: ವಲಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಂಟಿ ರಾಂಪುರೆ ಅವರು ಬೇರೆಯವರಿಂದ ತಮ್ಮ ಖಾತೆಗೆ ಜಮೆಯಾದ ₹3 ಲಕ್ಷವನ್ನು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಸಂಗಮ ಗ್ರಾಮದ ಕ್ರಾಸ್ ಬಳಿ ಇರುವ ಕೆನರಾ ಬ್ಯಾಂಕ್ ಖಾತೆಗೆ ಸೆ.3ರಂದು ತಮ್ಮದಲ್ಲದ ₹3 ಲಕ್ಷ ಜಮೆ ಆಗಿರುವ ಬಗ್ಗೆ ಶಾಖೆ ವ್ಯವಸ್ಥಾಪಕರಿಗೆ ತಿಳಿಸಿದ್ದಾರೆ. ಅಲ್ಲದೆ ಹಣ ಕಳೆದುಕೊಂಡ ವ್ಯಕ್ತಿಯನ್ನು ಸಂಪರ್ಕಿಸುವಂತೆ ಒತ್ತಾಯಿಸಿದ್ದಾರೆ.

ಎರಡು ದಿನಗಳ ನಂತರ ಸಾವಳಿ ಗ್ರಾಮದ ರೈತ ಮಾಧವರಾವ ಬಿರಾದಾರ ಎಂಬುವವರು ಬ್ಯಾಂಕಿಗೆ ಸಂಪರ್ಕಿಸಿ ಬೆಳೆ ಮಾರಾಟದಿಂದ ಬಂದ ಹಣವನ್ನು ನನ್ನ ಖಾತೆಗೆ ಜಮೆ ಮಾಡುವ ಸಂದರ್ಭದಲ್ಲಿ ಖಾತೆ ಸಂಖ್ಯೆ ತಪ್ಪಾಗಿ ಬರೆದಿದ್ದೇನೆ. ನನ್ನ ಹಣ ಬೇರೆಯವರ ಖಾತೆಗೆ ಜಮೆಯಾಗಿದ್ದು, ನನ್ನ ಹಣ ಮರಳಿಸುವಂತೆ ಕೋರಿದ್ದಾರೆ.

ತಮ್ಮ ಖಾತೆಗೆ ಜಮೆಯಾದ ಹಣವನ್ನು ರೈತ ಮಾಧವರಾವ ಅವರಿಗೆ ಶುಕ್ರವಾರ ಹಿಂದಿರುಗಿಸುವ ಮೂಲಕ ಬಂಟಿ ರಾಂಪುರೆ ಅವರು ಪ್ರಾಮಾಣಿಕತೆ ಮೆರೆದಿದ್ದಾರೆ. ಬಂಟಿ ಅವರ ಮಾನವೀಯ ಹಾಗೂ ಪ್ರಾಮಾಣಿಕ ನಡೆಗಾಗಿ ಸಾರ್ವಜನಿಕರು ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು.

ಬ್ಯಾಂಕ್ ವ್ಯವಸ್ಥಾಪಕ ಸುಮಂತಾ, ಕ್ಯಾಶಿಯರ್ ಹಾಲಪ್ಪ, ಸಿದ್ದು ಬಿರಾದಾರ, ಶಿವಾನಂದ ಜ್ಯಾಜೆ, ಹಣಮಂತ ಪಾಟೀಲ, ರಮಾಕಾಂತ ಬಿರಾದಾರ, ರವಿ ದಾನಾ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು