ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔರಾದ್: ₹10 ಕೋಟಿ ವೆಚ್ಚದ ಕಾಮಗಾರಿಗಳಿಗೆ ಸಚಿವ ಪ್ರಭು ಚವಾಣ್ ಚಾಲನೆ

ಕಳಪೆ ಕಾಮಗಾರಿಗೆ ಅವಕಾಶವಿಲ್ಲ; 3 ತಿಂಗಳಲ್ಲಿ ಪೂರ್ಣ: ಚವಾಣ್‌
Last Updated 29 ನವೆಂಬರ್ 2020, 1:51 IST
ಅಕ್ಷರ ಗಾತ್ರ

ಔರಾದ್: ‘ಗ್ರಾಮ ಸಂಚಾರ ನಡೆಸಿದ ವೇಳೆ ಜನರ ಬೇಡಿಕೆ ಹಾಗೂ ಅಲ್ಲಿಯ ವಾಸ್ತವ ಪರಿಸ್ಥಿತಿ ಅವಲೋಕಿಸಿ ಗ್ರಾಮ ವಾರು ಕ್ರಿಯಾ ಯೋಜನೆ ತಯಾರಿಸಿ ಕಾಮಗಾರಿಗಳನ್ನು ಕೈಗೆತ್ತಿ ಕೊಳ್ಳಲಾಗಿದೆ. ಈ ಎಲ್ಲ ಕೆಲಸ ಗುಣಮಟ್ಟದಿಂದ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ಮಾಡಲಾಗಿದೆ’ ಎಂದು ಜಿಲ್ಲಾ ಉಸ್ತು ವಾರಿ ಸಚಿವ ಪ್ರಭು ಚವಾಣ್‌ ತಿಳಿಸಿದರು.

ತಾಲ್ಲೂಕಿನ ಸಂತಪುರ ಹೋಬಳಿಯಲ್ಲಿ ಅಂದಾಜು ₹10 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಪ್ರತಿ ಗ್ರಾಮದಲ್ಲಿ ಕುಡಿಯುವ ನೀರು, ಶಾಲಾ ಕಟ್ಟಡ, ಸಿಸಿ ರಸ್ತೆ, ಚರಂಡಿ, ವಿವಿಧ ಸಮಾಜದ ಭವನ ನಿರ್ಮಾಣ ಕಾಮಗಾರಿಗೆ ಅನುದಾನ ನೀಡಲಾಗಿದೆ’ ಎಂದು ಹೇಳಿದರು.

ಮುಂಗನಾಳ ಗ್ರಾಮದಲ್ಲಿ ₹631 ಲಕ್ಷದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಮಹಾಡೋಣಗಾಂವ್‌ನಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಅಲ್ಪಸಂಖ್ಯಾತರ ವಾರ್ಡ್ ಹಾಗೂ ಎಸ್ಟಿ ಗಲ್ಲಿಯಲ್ಲಿ ₹5 ಲಕ್ಷದ ಸಿಸಿ ರಸ್ತೆಗಳು, ₹5 ಲಕ್ಷದ ಸ್ಮಶಾನ ಭೂಮಿ ಕಾಂಪೌಂಡ್ ಗೋಡೆ ಹಾಗೂ ₹15 ಲಕ್ಷ ಅನುದಾನದಲ್ಲಿ ಖೇಮಾ ತಾಂಡಾ ಮತ್ತು ಗೋವಿಂದ್‌ ತಾಂಡಾದಲ್ಲಿ ಸಂತ ಸೇವಾಲಾಲ್ ಭವನ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಬೆಳಕುಣಿ(ಚೌ)ಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ ₹15 ಲಕ್ಷದ 3 ಸಿಸಿ ರಸ್ತೆ ಕಾಮಗಾರಿಗಳು, ₹5 ಲಕ್ಷದ ಈದ್ಗಾ ಕಾಂಪೌಂಡ್ ಗೋಡೆ, ರಕ್ಷ್ಯಾಳ್(ಬಿ)ನಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ₹6 ಲಕ್ಷದ ಸಿಸಿ ರಸ್ತೆ ಕಾಮಗಾರಿ, ರಕ್ಷ್ಯಾಳ್(ಕೆ)ನಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ನಿಟ್ಟೂರ್(ಕೆ)ನಲ್ಲಿ ₹4.90 ಲಕ್ಷದ ಸಮುದಾಯ ಭವನ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಹೆಡಗಾಪುರನಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ₹5 ಲಕ್ಷದ ಸಿಸಿ ರಸ್ತೆ, ಈದ್ಗಾ ಕಾಂಪೌಂಡ್ ಗೋಡೆ, ಸ್ಮಶಾನ ಭೂಮಿ ಕಾಂಪೌಂಡ್ ಗೋಡೆ, ನಾಗೂರ(ಬಿ)ನಲ್ಲಿ ₹5 ಲಕ್ಷದ ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.

ಸಂತಪುರ ಗ್ರಾಮದಲ್ಲಿ ₹15 ಲಕ್ಷದ 3 ಸಿಸಿ ರಸ್ತೆ ಕಾಮಗಾರಿಗಳು, ಎಸ್ಟಿ ವಾರ್ಡ್‌ನಲ್ಲಿ ₹5 ಲಕ್ಷ ಮತ್ತು ₹13.05 ಲಕ್ಷದ ಸಿಸಿ ರಸ್ತೆಗಳು, ₹15 ಲಕ್ಷದ ಎರಡು ಸಿಸಿ, ಚರಂಡಿ ಕಾಮಗಾರಿ, ₹15 ಲಕ್ಷದ ಸ್ಮಶಾನ ಭೂಮಿ ಕಾಂಪೌಂಡ್ ಗೋಡೆ ನಿರ್ಮಾಣದ 3 ಕಾಮಗಾರಿಗಳು, ಜೋಜನಾದಲ್ಲಿ ₹5 ಲಕ್ಷದ ಸಿಸಿ ರಸ್ತೆ, ಸ್ಮಶಾನ ಭೂಮಿ ಕಾಂಪೌಂಡ್ ಗೋಡೆ, ಜಾಮಾ ಮಸೀದಿ ಕಾಂಪೌಂಡ್ ಗೋಡೆ, ಮೌಲಾಲಿ ದರ್ಗಾ ಕಾಂಪೌಂಡ್ ಗೋಡೆ, ನಾಗೂರ(ಎನ್)ನಲ್ಲಿ ₹35 ಲಕ್ಷದ ನೀರು ಸರಬರಾಜು ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿದರು.

ಲಿಂಗದಳ್ಳಿ (ಜೆ) ಎಸ್ಟಿ ವಾರ್ಡ್‌ನಲ್ಲಿ ₹6 ಲಕ್ಷದ ಸಿಸಿ ರಸ್ತೆ, ಎಕಲಾರ ತಾಂಡಾದಲ್ಲಿ ₹80 ಲಕ್ಷದ ರಸ್ತೆ ಕಾಮಗಾರಿ, ಜೊನ್ನಿಕೇರಿಯಲ್ಲಿ ₹4.90 ಲಕ್ಷದ ವಾಲ್ಮೀಕಿ ಸಮುದಾಯ ಭವನ, ಕೊಳ್ಳೂರ್‌ನಲ್ಲಿ ₹5 ಲಕ್ಷದ ಸಿಸಿ ರಸ್ತೆ, ಬರ್ದಾಪೂರ್ ನಲ್ಲಿ ₹6 ಲಕ್ಷದ ಸಿಸಿ ರಸ್ತೆ, ತುಳಜಾಪುರದಲ್ಲಿ ₹5 ಲಕ್ಷದ ಸಿಸಿ ರಸ್ತೆ ಹಾಗೂ ಬೋರಾಳದಲ್ಲಿ ₹5 ಲಕ್ಷ ಅನುದಾನದ ಸಿಸಿ ರಸ್ತೆ ಕಾಮಗಾರಿಗೆ ಸಚಿವರು ಚಾಲನೆ ನೀಡಿದರು.

ತಾ.ಪಂ ಅಧ್ಯಕ್ಷ ಗಿರೀಶ್ ವಡೆ ಯರ್, ಜಿ.ಪಂ ಮಾಜಿ ಸದಸ್ಯ ವಸಂತ ಬಿರಾದಾರ, ಕಾಶಿನಾಥ ಜಾಧವ್, ಎಪಿಎಂಸಿ ಅಧ್ಯಕ್ಷ ರಮೇಶ ಉಪಾಸೆ, ಧುರೀಣ ಬಂಡೆಪ್ಪ ಕಂಟೆ, ರಾಮಶೆಟ್ಟಿ ಪನ್ನಾಳೆ, ಗಣಪತಿ ದೇಶಪಾಂಡೆ, ಸಂತೋಷ ಪಾಟೀಲ, ಗುತ್ತಿಗೆದಾರ ಸೂರ್ಯಕಾಂತ ಅಲ್ಮಾಜೆ, ತಹಶೀಲ್ದಾರ್ ಎಂ.ಚಂದ್ರಶೇಖರ್, ತಾ.ಪಂ ಮುಖ್ಯಾ ಧಿಕಾರಿ ಮಾಣಿಕರಾವ ಪಾಟೀಲ, ಎಂಜಿ ನಿಯರ್ ವೀರಶೆಟ್ಟಿ ರಾಠೋಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT