ಸೋಮವಾರ, ಜುಲೈ 26, 2021
21 °C

10 ಹೊಲಿಗೆ ಯಂತ್ರ ಉಚಿತ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಅಪೋಸ್ತಲಿಕ್ ಕಾರ್ಮೆಲ್ ಸಂಸ್ಥೆಯ 153ನೇ ವರ್ಷಾಚರಣೆ ಪ್ರಯುಕ್ತ ಇಲ್ಲಿಯ ಕಾರ್ಮೆಲ್ ಸೇವಾ ಸಂಸ್ಥೆಯು 10 ಬಡ ಮಹಿಳೆಯರಿಗೆ ಹೊಲಿಗೆ ಯಂತ್ರ ಉಚಿತವಾಗಿ ವಿತರಿಸಿದೆ.

ಕಾರ್ಮೆಲ್ ಸೇವಾ ಸಂಸ್ಥೆಯು ಅನೇಕ ಸ್ವಸಹಾಯ ಗುಂಪುಗಳನ್ನು ರಚಿಸಿ ಮಹಿಳಾ ಸಬಲೀಕರಣಕ್ಕೆ ಶ್ರಮಿಸುತ್ತಿದೆ ಎಂದು ನಗರದಲ್ಲಿ ನಡೆದ ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮದಲ್ಲಿ ಫಾದರ್ ವಿಲ್ಸನ್ ಫರ್ನಾಂಡೀಸ್ ಹೇಳಿದರು.

ಸಂಸ್ಥೆಯ ಮುಖ್ಯಸ್ಥೆ ಸಿಸ್ಟರ್ ಕ್ರಿಸ್ತಿನ್ ಮಿಸ್ಕಿತ್ 22 ವರ್ಷಗಳಿಂದ ಜಿಲ್ಲೆಯಲ್ಲಿ ಬಡ ಮಕ್ಕಳ ಶಿಕ್ಷಣ, ಹೆಣ್ಣುಮಕ್ಕಳ ಅಭಿವೃದ್ಧಿಗೆ ಉತ್ತೇಜನ ನೀಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.

ಸಿಸ್ಟರ್ ಕ್ರಿಸ್ಟಿನ್ ಮಿಸ್ಕಿತ್, ಜ್ಯೋತಿ ಮಾತನಾಡಿದರು. ಫಾದರ್ ಅನಿಲ್ ಕಿರಣ, ಸಿಸ್ಟರ್ ಅನ್ಸಿಲ್ಲಾ, ಜೊವಿಟಾ, ಜಿನಿ, ಮನಿಷಾ, ಸಾಮಾಜಿಕ ಕಾರ್ಯಕರ್ತರಾದ ಸೂರ್ಯಕಾಂತ ರಾಜು, ಎಲಿಜಬೆತ್ ರಾಣಿ, ಸುನಿತಾ ಶರಣಪ್ಪ, ಸುನಿತಾ ಸತೀಶ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.