ಗುರುವಾರ , ಆಗಸ್ಟ್ 5, 2021
25 °C
ಪಾಲನೆಯಾಗದ ನಿಯಮ: ಗಂಭೀರ ಕ್ರಮಕ್ಕೆ ಮುಖಂಡರ ಆಗ್ರಹ

ಬೀದರ್ | ಒಂದೇ ದಿನ 15 ಮಂದಿಗೆ ಕೋವಿಡ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಔರಾದ್: ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಔರಾದ್ ಹಾಗೂ ಕಮಲನಗರ ತಾಲ್ಲೂಕುಗಳಲ್ಲಿ ಗುರುವಾರ ಒಂದೇ ದಿನ 15 ಜನರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ.

ಹಾಲಹಳ್ಳಿ ಗ್ರಾಮದಲ್ಲಿ 9 ಜನರಿಗೆ ಸೋಂಕು ದೃಢಪಟ್ಟಿದೆ. ಔರಾದ್ ಪಟ್ಟಣದ ಗರ್ಭಿಣಿಯೊಬ್ಬರಿಗೆ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಶಿಕ್ಷಕರ ಕಾಲೊನಿ ಸೀಲ್‌ಡೌನ್ ಮಾಡಲಾಗಿದೆ.

ಪಟ್ಟಣದ ಸಪ್ತಗಿರಿ ಹೋಟೆಲ್‌ನಲ್ಲಿ ಕ್ವಾರಂಟೈನ್‌ನಲ್ಲಿರುವ 30 ವರ್ಷದ ವ್ಯಕ್ತಿಯೊಬ್ಬರಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಇಡೀ ಹೋಟೆಲ್ ಅನ್ನು ಸೀಲ್‌ಡೌನ್ ಮಾಡಲಾಗಿದೆ. ಬಹುತೇಕ ಈ ಎಲ್ಲ ಸೋಂಕಿತರು ಮಹಾರಾಷ್ಟ್ರದ ನಂಟು ಹೊಂದಿರುವುದರಿಂದ ತಾಲ್ಲೂಕಿನ ಜನರಲ್ಲಿ ಸಹಜವಾಗಿಯೇ ಆತಂಕ ಆವರಿಸಿದೆ.

ಪಾಲನೆಯಾಗದ ನಿಯಮ: ತಾಲ್ಲೂಕಿನಲ್ಲಿ ಲಾಕ್‌ಡೌನ್ ನಿಯಮಗಳು ಪಾಲನೆಯಾಗುತ್ತಿಲ್ಲ. ಮದುವೆ–ಸಭೆ ಸಮಾರಂಭಗಳು ನಿರಾತಂಕವಾಗಿ ನಡೆಯುತ್ತಿವೆ. ಮದುವೆಯಲ್ಲಿ 50 ಜನ ಮಾತ್ರ ಸೇರಲು ಅವಕಾಶವಿದೆ. ಆದರೆ ನೂರಾರು ಜನ ಸೇರುವುದು ಸಾಮಾನ್ಯವಾಗಿದೆ. ಕಲ್ಯಾಣ ಮಂಟಪದಲ್ಲೂ ಮದುವೆಗಳು ನಡೆಯುತ್ತಿವೆ. ಕೆಲ ಕಡೆ ಜನ ಮಾಸ್ಕ್ ಇಲ್ಲದೆ ತಿರುಗಾಡುತ್ತಿದ್ದಾರೆ. ತರಕಾರಿ, ಅಂಗಡಿಗಳ ಮುಂದೆ ಜನ ಸೇರಿ ಅಂತರ ಕಾಯ್ದುಕೊಳ್ಳುವ ನಿಯಮ ಗಾಳಿಗೆ ತೂರಲಾಗುತ್ತಿದೆ.

‘ಕೋವಿಡ್ ಸೋಕು ಹೆಚ್ಚುತ್ತಿದ್ದರೂ ಸೂಕ್ತ ನಿಯಮ ಪಾಲನೆಯಾಗುತ್ತಿಲ್ಲ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಿಲ್ಲ. ಆಶಾ ಕಾರ್ಯಕರ್ತೆಯರನ್ನು ಬಿಟ್ಟರೆ ಸಂಬಂಧಿತ ಇತರರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ’ ಎಂದು ಡಿಎಸ್ಎಸ್ ಸಂಚಾಲಕ ಧನರಾಜ ಮುಸ್ತಾಪುರ ಅಸಮಾಧಾನ ಹೊರ ಹಾಕಿದ್ದಾರೆ.

‘ಕಲ್ಯಾಣ ಮಂಪಟದಲ್ಲಿ ಮದುವೆ ಮಾಡಿದರೂ 50 ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. ಈ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈ ಕುರಿತಂತೆ ಸಂಬಂಧಿತ ಠಾಣೆ ಪಿಎಸ್ಐ ಅವರಿಗೂ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಲಾಕ್‌ಡೌನ್‌ ನಿಯಮ ಯಾರೇ ಉಲ್ಲಂಘಿಸಿದರೂ ಪ್ರಕರಣ ದಾಖಲಿಸಬೇಕಾಗುತ್ತದೆ’ ಎಂದು ಸಿಪಿಐ ರಾಘವೇಂದ್ರ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು