ಭಾನುವಾರ, ಜೂನ್ 13, 2021
25 °C

ಭಾಲ್ಕಿಯ ನಾವದಗಿಯಲ್ಲಿ 15 ದಿನದಲ್ಲಿ 20 ಜನ ಸಾವು: ಕಾರಣ ಅಸ್ಪಷ್ಟ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಾಲ್ಕಿ: ತಾಲ್ಲೂಕಿನ ನಾವದಗಿ ಗ್ರಾಮದಲ್ಲಿ ಕಳೆದ 15 ದಿನಗಳಲ್ಲಿ ಸುಮಾರು 20 ಜನರು ಮೃತಪಟ್ಟಿದ್ದಾರೆ. ಸತ್ತವರಲ್ಲಿ ಹೆಚ್ಚಿನ ಜನ ವಯೋವೃದ್ಧರಾಗಿದ್ದಾರೆ. ಇವರಲ್ಲಿ ಕೆಲವು ಯುವಕರು ಮೃತಪಟ್ಟಿದ್ದು, ಗ್ರಾಮಸ್ಥರಿಗೆ ನುಂಗಲಾರದ ತುತ್ತಾಗಿದೆ.

ಇನ್ನು ಗ್ರಾಮದ ಕೆಲವು ಕುಟುಂಬಗಳಲ್ಲಿ ಸಂಪೂರ್ಣ ಕುಟುಂಬವೇ ಜ್ವರ, ಶೀತ, ಕೆಮ್ಮಿನಿಂದ ನರಳುತ್ತಿದ್ದಾರೆ. ಮೃತರು ಕೋವಿಡ್‌ ಅಥವಾ ಸಹಜ ಸಾವೋ ಎಂಬುದು ಗ್ರಾಮಸ್ಥರಿಗೆ ತಿಳಿದಿಲ್ಲ. ಮೃತರ ಅಂತ್ಯಸಂಸ್ಕಾರದಲ್ಲಿ ಬಹುತೇಕ ಗ್ರಾಮಸ್ಥರು ಭಾಗಿಯಾಗಿದ್ದಾರೆ.

‘15 ವರ್ಷಗಳ ಹಿಂದೆಯೂ ಇದೇ ರೀತಿ ಗ್ರಾಮದಲ್ಲಿ ಸರಣಿ ಸಾವುಗಳು ಸಂಭವಿಸಿದ್ದವು. ವೈದ್ಯರು, ವಿಜ್ಞಾನಿಗಳು ಆಗಮಿಸಿ ಗ್ರಾಮದಲ್ಲಿಯ ನೀರು ತಪಾಸಣೆ ಮಾಡಿ, ಗ್ರಾಮದಲ್ಲಿ ಸೋಡಿಯಂ ಮಿಶ್ರಿತ ನೀರು ಕುಡಿದು ಜನರು ಸಾಯುತ್ತಿದ್ದಾರೆ ಎಂದು ವರದಿ ನೀಡಿದ್ದರು. ಈಗ ಕೊರೊನಾದಿಂದಾಗಿ ಸರಣಿ ಸಾವಿನ ಬಗ್ಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ’ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯೆ ಭಾಗಮ್ಮಾ ಈರಪ್ಪಾ ಬಿರಾದಾರ.

‘ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಬೇಕು’ ಎಂದು ಗ್ರಾಮದ ಪ್ರಮುಖರಾದ ಬಸಪ್ಪಾ ಆನಂದಪ್ಪಾ ಆಗ್ರಹಿಸುತ್ತಾರೆ.

‘ನಾವದಗಿಯಲ್ಲಿ ಆರೋಗ್ಯ ಇಲಾಖೆಯಿಂದ ಮೂರು ದಿನದ ಶಿಬಿರ ಆಯೋಜಿಸಿದ್ದೆವು. ಹೆಚ್ಚಿನ ಜನ ಕೋವಿಡ್ ಪರೀಕ್ಷೆಗೆ, ಲಸಿಕೆ ಪಡೆಯಲು ಹಿಂದೇಟು ಹಾಕಿದ್ದಾರೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಜ್ಞಾನೇಶ್ವರ ನಿರಗುಡೆ ತಿಳಿಸುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.