ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗದಲ್ಲಿ ಏರ್ಪಡಿಸಿರುವ ಶೋಷಿತರ ಸಮಾವೇಶಕ್ಕೆ 20 ಕ್ವಿಂಟಲ್‌ ಲಾಡು

Published 27 ಜನವರಿ 2024, 16:25 IST
Last Updated 27 ಜನವರಿ 2024, 16:25 IST
ಅಕ್ಷರ ಗಾತ್ರ

ಬೀದರ್‌: ಚಿತ್ರದುರ್ಗದಲ್ಲಿ ಏರ್ಪಡಿಸಿರುವ ಶೋಷಿತರ ಜಾಗೃತಿ ಸಮಾವೇಶದಲ್ಲಿ ಪಾಲ್ಗೊಳ್ಳುವವರಿಗೆ ವಿತರಿಸಲು ನಗರದಿಂದ ಶನಿವಾರ 10 ಕ್ವಿಂಟಲ್‌ ಲಾಡು ಕಳುಹಿಸಿಕೊಡಲಾಗಿದೆ.

ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಜಿಲ್ಲಾ ಘಟಕದ ಗೌರವ ಅಧ್ಯಕ್ಷ ಅಬ್ದುಲ್ ಮನ್ನಾನ್ ಸೇಠ್ ಅವರು ನಗರದಲ್ಲಿ 10 ಕ್ವಿಂಟಲ್‌ ಲಾಡು ಮಾಡಿಸಿ ಚಿತ್ರದುರ್ಗಕ್ಕೆ ಕಳಿಸಿಕೊಟ್ಟಿದ್ದಾರೆ. ಜೊತೆಗೆ ಚಿತ್ರದುರ್ಗದಲ್ಲಿಯೇ 10 ಕ್ವಿಂಟಲ್‌ ಲಾಡು ಮಾಡಿಸಿದ್ದಾರೆ. 20 ಕ್ವಿಂಟಲ್‌ ಲಾಡು ತಯಾರಿಸಲು ₹2.50 ಲಕ್ಷ ಖರ್ಚಾಗಿದೆ ಎಂದು ಮನ್ನಾನ್‌ ಸೇಠ್‌ ತಿಳಿಸಿದ್ದಾರೆ.

ಮುಖಂಡರಾದ ಬಸವರಾಜ ಮಾಳಗೆ, ನಾರಾಯಣ ಗಣೇಶ, ಬಾಬು ಪಾಸ್ವಾನ್, ಅಂಬಾದಾಸ ಗಾಯಕವಾಡ್, ಸುಭಾಷ್ ಟಿಳ್ಳೆಕರ್ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT