ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಬ್ರಿಮ್ಸ್ ಆಸ್ಪತ್ರೆಗೆ 5 ಸಾವಿರ ಹ್ಯಾಂಡ್ ಗ್ಲೌಸ್ ಕೊಡುಗೆ

Last Updated 6 ಜೂನ್ 2021, 8:37 IST
ಅಕ್ಷರ ಗಾತ್ರ

ಬೀದರ್: ರೋಟರಿ ಕ್ಲಬ್ ಆಫ್ ಬೀದರ್ ಫೋರ್ಟ್ ಇಲ್ಲಿಯ ಬ್ರಿಮ್ಸ್ ಆಸ್ಪತ್ರೆಗೆ 5 ಸಾವಿರ ಹ್ಯಾಂಡ್ ಗ್ಲೌಸ್‍ಗಳನ್ನು ಕೊಡುಗೆಯಾಗಿ ನೀಡಿದೆ.

ನಗರದ ಐಎಂಎ ಹಾಲ್‍ನಲ್ಲಿ ಕ್ಲಬ್ ಅಧ್ಯಕ್ಷ ಶೇಖರ ರಾಗಾ ಅವರು ಬ್ರಿಮ್ಸ್ ವೈದ್ಯಾಧಿಕಾರಿಗೆ ಹ್ಯಾಂಡ್ ಗ್ಲೌಸ್ ಹಸ್ತಾಂತರಿಸಿದರು.

ರೋಟರಿ ಪಲ್ಸ್ ಪೊಲಿಯೋ ಕಮಿಟಿ ಅಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಜೀವದ ಹಂಗು ತೊರೆದು ಸೋಂಕಿತರ ಸೇವೆಯಲ್ಲಿ ತೊಡಗಿದ್ದಾರೆ. ಅವರ ಸುರಕ್ಷತೆಗಾಗಿ ಹ್ಯಾಂಡ್ ಗ್ಲೌಸ್ ವಿತರಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಆಡಳಿತ, ಆರೋಗ್ಯ ಇಲಾಖೆ ಅಧಿಕಾರಿಗಳು, ವೈದ್ಯರು ಹಾಗೂ ಕೋವಿಡ್ ವಾರಿಯರ್‍ಗಳ ನಿರಂತರ ಪ್ರಯತ್ನದಿಂದಾಗಿ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಬಂದಿದೆ. ಜಿಲ್ಲೆಯಲ್ಲಿ ಇಡೀ ರಾಜ್ಯದಲ್ಲೇ ಅತಿ ಕಡಿಮೆ ಪ್ರಕರಣಗಳು ದಾಖಲಾಗುತ್ತಿವೆ ಎಂದು ತಿಳಿಸಿದರು.

ಅಂತರರಾಷ್ಟ್ರೀಯ ರೋಟರಿ ಸಂಸ್ಥೆಯ ವಿವಿಧ ಕ್ಲಬ್‍ಗಳು ಕೋವಿಡ್ ಸೋಂಕು ತಡೆ ಕಾರ್ಯಕ್ಕಾಗಿ ಹಲವು ರೀತಿಯ ನೆರವು ಒದಗಿಸಿವೆ. ಮುಂದೆಯೂ ಸಾಮಾಜಿಕ ಚಟುವಟಿಕೆ ಮುಂದುವರಿಸಲಿವೆ ಎಂದು ಹೇಳಿದರು.

ಹ್ಯಾಂಡ್ ಗ್ಲೌಸ್ ಸ್ವೀಕರಿಸಿದ ಬ್ರಿಮ್ಸ್‍ನ ಡಾ. ಲೋಕೇಶ ಪಾಟೀಲ ಮಾತನಾಡಿ, ಬ್ರಿಮ್ಸ್ ಆಸ್ಪತ್ರೆಗೆ ಅವಶ್ಯಕತೆ ಇರುವುದನ್ನು ಮನಗಂಡು ಹ್ಯಾಂಡ್ ಗ್ಲೌಸ್ ವಿತರಿಸಿರುವ ರೋಟರಿ ಕ್ಲಬ್ ಆಫ್ ಬೀದರ್ ಫೋರ್ಟ್ ಕಾರ್ಯ ಪ್ರಶಂಸನೀಯವಾಗಿದೆ ಎಂದು ಹೇಳಿದರು.

ಅಂತರರಾಷ್ಟ್ರೀಯ ರೋಟರಿ ಸಂಸ್ಥೆ ಹಿಂದಿನಿಂದಲೂ ವಿಪತ್ತಿನ ಸಂದರ್ಭದಲ್ಲಿ ಸದಾ ಜನರ ರಕ್ಷಣೆಗೆ ಶ್ರಮಿಸುತ್ತ ಬಂದಿದೆ. ಕೋವಿಡ್ ವೇಳೆಯೂ ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸಿದೆ ಎಂದು ತಿಳಿಸಿದರು.

ಅಂತರರಾಷ್ಟ್ರೀಯ ರೋಟರಿ ಸಂಸ್ಥೆಯ ಕಲ್ಯಾಣ ಝೋನ್ ಸಹಾಯಕ ಗವರ್ನರ್ ಡಾ. ಜಗದೀಶ ಪಾಟೀಲ, ಖಜಾಂಚಿ ಸಂಗಮೇಶ ಆಣದೂರೆ, ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ಅಧ್ಯಕ್ಷ ಸೂರ್ಯಕಾಂತ ರಾಮಶೆಟ್ಟಿ, ಕಾರ್ಯದರ್ಶಿ ಡಾ. ಕಪಿಲ್ ಪಾಟೀಲ, ಜಹೀರ್ ಅನ್ವರ್, ರಾಜೇಂದ್ರ ಅಗ್ರವಾಲ್, ಡಾ. ಸುಭಾಷ್ ಬಶೆಟ್ಟಿ, ಸಂತೋಷ ವನಕುದರೆ, ಕಾಶೀನಾಥ ಪಾಟೀಲ, ಭರತ ಪಾಟೀಲ, ಆನಂದಕುಮಾರ ಪಬ್ಬಾ, ಸತ್ಯಪ್ರಕಾಶ ಇದ್ದರು.

ರೋಟರಿ ಕ್ಲಬ್ ಆಫ್ ಬೀದರ್ ಫೋರ್ಟ್ ಕಾರ್ಯದರ್ಶಿ ಪ್ರೊ. ಎಸ್.ಬಿ. ಚಿಟ್ಟಾ ಸ್ವಾಗತಿಸಿದರು. ಶಿವಕುಮಾರ ಯಲಾಲ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT