ಚಿಟಗುಪ್ಪ: ‘ಎಲ್ಲ ರಾಜಕೀಯ ಪಕ್ಷದ ಮುಖಂಡರು ಒಗ್ಗಟ್ಟಾಗಿ ದುಡಿದಲ್ಲಿ ಪಟ್ಟಣದ ಸಮಗ್ರ ಪ್ರಗತಿ ಸಾಧ್ಯ’ ಎಂದು ಶಾಸಕ ರಾಜಶೇಖರ ಪಾಟೀಲ ಹೇಳಿದರು. ಇಲ್ಲಿಯ ಪುರಸಭೆ ಕಚೇರಿಯಲ್ಲಿ ನಡೆದ 2017–18ನೇ ಸಾಲಿನ ಎಸ್.ಎಫ್.ಸಿ ಮುಕ್ತ ನಿಧಿ ಯೋಜನೆಯ ಅಡಿಯಲ್ಲಿ ವಿವಿಧ ಫಲಾನುಭವಿಗಳಿಗೆ ಸರ್ಕಾರದ ಉಚಿತ ಸಿಲಿಂಡರ್ ಕಿಟ್ ವಿತರಿಸಿ ಅವರು ಮಾತನಾಡಿದರು.

‘ಸರ್ಕಾರ ರೂಪಿಸುವ ಯೋಜನೆಗಳು ಎಲ್ಲರಿಗೂ ಸಮಾನವಾಗಿ ಕಲ್ಪಿಸಿ, ಆರ್ಥಿಕವಾಗಿ ಸ್ವಾವಲಂಭಿ ಆಗುವುದಕ್ಕೆ ಪ್ರೇರಣೆ ನೀಡುವ ಉದ್ದೇಶವಾಗಿರುತ್ತದೆ. ಹೀಗಾಗಿ ಫಲಾನುಭವಿಗಳು ಅವುಗಳ ಸದ್ಭಳಕೆ ಮಾಡಿಕೊಳ್ಳಬೇಕು’ ಎಂದರು.

₹3.50 ಲಕ್ಷ ಮೊತ್ತದಲ್ಲಿ 82 ಫಲಾನುಭವಿಗಳಿಗೆ ಸಿಲಿಂಡರ್ ಕಿಟ್, ಶೇ 3 ಯೋಜನೆ ಅಡಿಯಲ್ಲಿ 10 ಅಂಗವಿಕಲ ಫಲಾನುಭವಿಗಳಿಗೆ ಜೀವ ವಿಮಾ ಬಾಂಡ್, 35 ಸ್ವ ಸಹಾಯ ಸಂಘಗಳಿಗೆ ತಲಾ ₹ 10 ಸಾವಿರ ಮೊತ್ತದ ಸಹಾಯಧನ ಚೆಕ್ ವಿತರಿಸಲಾಯಿತು.

ಮುಖ್ಯಾಧಿಕಾರಿ ಹುಸಾಮೋದ್ದೀನ್ ಬಾಬಾ, ಪುರಸಭೆ ಉಪಾಧ್ಯಕ್ಷ ಮಹ್ಮದ್ ಲೈಕ್, ಸದಸ್ಯರಾದ ಭೀಮಣ್ಣ ಶಾಖಾ, ಸುಭಾಷ ಕುಂಬಾರ್, ಕರೆಪ್ಪ ಗಡಮಿ, ಅಹ್ಮದ್ ಪಾಶಾ, ಮುಜಾಫರ್ ಪಟೇಲ್,ವಿಜಯಕುಮಾರ ಬಮ್ಮಣಿ, ಮೊಹಿಯೋದ್ದೀನ್ ಲಾಠೋಡಿ, ಕ್ರಿಸ್ತಾನಂದ್ ಕೆರೂರ್, ಮನೋಜ ಕುಮಾರ್, ಗೋವಿಂದರಾವ್ ಬುರಾಳೆ, ಸಾಲಾರಬಿ ಅಬ್ದುಲ್ ಖಾದರ್, ಜಲೀಸಾ ಬೇಗಂ, ಪಾರ್ವತಿ ರಮೇಶ್, ನಿರ್ಮಲಾ ಇದ್ದರು. ಪುರಸಭೆ ಅಧ್ಯಕ್ಷೆ ಗೌರಮ್ಮ ನರನಾಳ ಅಧ್ಯಕ್ಷತೆ ವಹಿಸಿದ್ದರು. ಅಶೋಕ ಚನ್ನಕೋಟೆ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.