ಗುರುವಾರ , ಆಗಸ್ಟ್ 11, 2022
21 °C
ಸೇನಾ ಪಡೆಗಳ ಪುನಃಶ್ಚೇತನ ವಿಚಾರ ಸಂಕಿರಣ 5ರಂದು

650 ಅಭ್ಯರ್ಥಿಗಳ ಹೆಸರು ನೋಂದಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯು ಜಿಲ್ಲಾ ಆಡಳಿತ ಹಾಗೂ ಗ್ಲೋಬಲ್ ಸೈನಿಕ ಅಕಾಡೆಮಿ ಸಹಯೋಗದಲ್ಲಿ ನಗರದ ಡಾ. ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ಡಿ.5ರಂದು ಹಮ್ಮಿಕೊಂಡಿರುವ ಸೇನಾ ಪಡೆಗಳ ಪುನಃಶ್ಚೇತನ; ಸೇನೆ ಸೇರಲು ಇರುವ ಅವಕಾಶಗಳು ಕುರಿತ ವಿಚಾರ ಗೋಷ್ಠಿ ಯಲ್ಲಿ ಭಾಗವಹಿಸಲು 650 ಅಭ್ಯರ್ಥಿ ಗಳು ಹೆಸರು ನೋಂದಾಯಿಸಿದ್ದಾರೆ.

ಕೊರೊನಾ ಸೋಂಕಿನ ಕಾರಣ ಜಿಲ್ಲಾ ರಂಗಮಂದಿರದಲ್ಲಿ 300 ಜನರಿಗೆ ಮಾತ್ರ ಅಂತರ ಕಾಯ್ದುಕೊಂಡು ಕುಳಿತುಕೊಳ್ಳಲು ಅವಕಾಶ ಇದೆ. ಹೀಗಾಗಿ ಮೊದಲು ಹೆಸರು ನೋಂದಾಯಿಸಿದವರಿಗೆ ವಿಚಾರಗೋಷ್ಠಿಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗುವುದು. ಉಳಿದ ಅಭ್ಯರ್ಥಿಗಳು ಹಾಗೂ ಇತರ ಆಕಸ್ತರು ‘ರೋಟರಿ ಕ್ಲಬ್ ಬೀದರ್ ನ್ಯೂ ಸೆಂಚುರಿ’ ಫೇಸ್‍ಬುಕ್ ಖಾತೆ ಅಥವಾ ‘ರೋಟರಿ ನ್ಯೂ ಸೆಂಚುರಿ ಬೀದರ್’ ಯುಟ್ಯೂಬ್ ವಿಳಾಸದಲ್ಲಿ ನೇರ ಪ್ರಸಾರ ವೀಕ್ಷಿಸಬಹುದು ಎಂದು ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ಅಧ್ಯಕ್ಷ ಸೂರ್ಯಕಾಂತ ರಾಮಶೆಟ್ಟಿ ತಿಳಿಸಿದ್ದಾರೆ.

ವಿವಿಧೆಡೆಯಿಂದ ಉಪನ್ಯಾಸ ನೀಡಲು ಬರಲಿರುವ ಹಾಲಿ ಹಾಗೂ ನಿವೃತ್ತ ಸೇನಾ ಪಡೆಗಳ ಅಧಿಕಾರಿಗಳಿಗೆ ಹಬ್ಸಿಕೋಟ್ ಅತಿಥಿಗೃಹದಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಅಭ್ಯರ್ಥಿಗಳಿಗೆ ಊಟದ ವ್ಯವಸ್ಥೆಯೂ ಇರಲಿದೆ ಎಂದು ಹೇಳಿದ್ದಾರೆ.

ಕಾರ್ಯಕ್ರಮ ಆಯೋಜನ ಸಮಿತಿಯ ಅಧ್ಯಕ್ಷ ಕರ್ನಲ್ ಶರಣಪ್ಪ ಸಿಕೇನಪುರೆ, ಉಪಾಧ್ಯಕ್ಷ ನಿತಿನ್ ಕರ್ಪೂರ್, ಕಾರ್ಯದರ್ಶಿ ಡಾ. ಕಪಿಲ್ ಪಾಟೀಲ, ಖಜಾಂಚಿ ಡಾ. ರಿತೇಶ ಸುಲೆಗಾಂವ, ಸದಸ್ಯರಾದ ಸತೀಶ ಸ್ವಾಮಿ, ರಿಷಿಕೇಶ ಪಾಟೀಲ, ಡಾ. ರಘು ಕೃಷ್ಣಮೂರ್ತಿ, ಡಾ. ಶರಣ ಬುಳ್ಳಾ, ಚೇತನ್ ಮೇಗೂರ, ಶಿವಕುಮಾರ ಪಾಖಲ್, ನಿತೇಶ ಬಿರಾದಾರ, ಜಯೇಶ ಪಾಟೀಲ, ರಾಜಕುಮಾರ ಅಳ್ಳೆ ಹಾಗೂ ಇತರರು ಕಾರ್ಯಕ್ರಮ ಯಶಸ್ವಿಗೊಳಿಸಲು ಶ್ರಮಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು