ಬೀದರ್: ಸೇವೆ ಮತ್ತು ಸಮರ್ಪಣೆ ಸಪ್ತಾಹ ಅಂಗವಾಗಿ ಬಿಜೆಪಿ ವತಿಯಿಂದ ನಗರದ ಶಿವನಗರದ ವಾಕಿಂಗ್ ಟ್ರ್ಯಾಕ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ 71 ಸೂರ್ಯ ನಮಸ್ಕಾರ ಸಮರ್ಪಿಸಲಾಯಿತು.

ಬಿಜೆಪಿ ಕಾರ್ಯಕರ್ತರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ವಿಶಿಷ್ಟ ಕಾರ್ಯಕ್ರಮದಲ್ಲಿ ಭಾಗಿಯಾದರು.

ಮೋದಿ ಅವರ ಜೀವನ ಮತ್ತು ಸಾಧನೆ ಒಳಗೊಂಡ ಪೋಸ್ಟರ್ಗಳನ್ನು ಪ್ರದರ್ಶಿಸಲಾಯಿತು. ಇದೇ ವೇಳೆ ದೇಶವನ್ನು ಪ್ರಗತಿ ಪಥದತ್ತ ಮುನ್ನಡೆಸುತ್ತಿರುವ ಪ್ರಧಾನಿ ಅವರಿಗೆ ಧನ್ಯವಾದ ಅರ್ಪಿಸಿ, ಅನೇಕರು ಪತ್ರ ಬರೆದು ಪೆಟ್ಟಿಗೆಗೆ ಹಾಕಿದರು.
ಸಸಿಗೆ ನೀರೆರೆದು ಕಾರ್ಯಕ್ರಮ ಉದ್ಘಾಟಿಸಿದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್ ಅವರು ಮಾತನಾಡಿ, ‘ಸೇವೆ ಮತ್ತು ಸಮರ್ಪಣೆ ಸಪ್ತಾಹ ನಿಮಿತ್ತ ಅಕ್ಟೋಬರ್ 7 ರ ವರೆಗೆ ವಿವಿಧ ಸೇವಾ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾ ಸಾಮಾಜಿಕ ಜಾಲತಾಣ ಪ್ರಕೋಷ್ಠದ ಸಂಚಾಲಕ ಸಚ್ಚಿದಾನಂದ ಚಿದ್ರೆ ಮಾತನಾಡಿ, ಜೂನ್ 21 ವಿಶ್ವ ಯೋಗ ದಿನವಾಗಿ ಘೋಷಿಸಲು ಮೋದಿ ಅವರೇ ಕಾರಣ. ಇಂದು ಇಡೀ ವಿಶ್ವವೇ ಯೋಗವನ್ನು ಅಪ್ಪಿಕೊಳ್ಳುತ್ತಿದೆ ಎಂದು ತಿಳಿಸಿದರು.

ಸೇವೆ ಮತ್ತು ಸಮರ್ಪಣೆ ಅಭಿಯಾನದ ಜಿಲ್ಲಾ ಪ್ರಚಾರ ಸಂಚಾಲಕ ಮಹೇಶ್ವರ ಸ್ವಾಮಿ ಮಾತನಾಡಿದರು.
ಮೆಗ್ಸ್ ವೆಲ್ನೆಸ್ ಕ್ಲಬ್ ಮಾಲೀಕ ಮಹಾದೇವ ತರನಳ್ಳೆ, ಮೇಘಾ ತರನಳ್ಳೆ ಹಾಗೂ ತಂಡದವರು ಸೂರ್ಯ ನಮಸ್ಕಾರ ವಿಧಾನಗಳನ್ನು ನಡೆಸಿಕೊಟ್ಟರು.

ಸೇವೆ ಮತ್ತು ಸಮರ್ಪಣೆ ಅಭಿಯಾನದ ಜಿಲ್ಲಾ ಪ್ರಚಾರ ಸಹ ಸಂಚಾಲಕ ರಾಜಕುಮಾರ ಪಾಟೀಲ ನೇಮತಾಬಾದ್, ಬಿಜೆಪಿ ಆರ್ಥಿಕ ಪ್ರಕೋಷ್ಠದ ಜಿಲ್ಲಾ ಸಂಚಾಲಕ ನಿತಿನ್ ಕರ್ಪೂರ್, ಸಹ ಸಂಚಾಲಕ ಸತೀಶ ಸ್ವಾಮಿ, ಸೂರ್ಯ ನಮಸ್ಕಾರ ಸಂಘದ ಕಾಮಶೆಟ್ಟಿ ಚಿಕ್ಕಬಸೆ, ಶಿವಕುಮಾರ ಪಾಟೀಲ, ನಾಗರಾಜ ಜೋಗಿ, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಪಾಟೀಲ ಶೇಕಾಪುರ, ಮಹಿಳಾ ಮೋರ್ಚಾ ರಾಜ್ಯ ಘಟಕದ ಕಾರ್ಯದರ್ಶಿ ಚಂದ್ರಕಲಾ ವಿಶ್ವಕರ್ಮ, ಶೋಭಾ ಅಣ್ಣೆಪ್ಪ, ಹೇಮಲತಾ ಜೋಶಿ, ನರೇಶ ಗೌಳಿ, ಚಂದ್ರಶೇಖರ ಗಾದಾ ಪಾಲ್ಗೊಂಡಿದ್ದರು. ಶ್ರೀಕಾಂತ ಮೋದಿ ಅವರ ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಸಮಾರೋಪಗೊಂಡಿತು.

ಬಿಜೆಪಿ ಯುವ ಮೊರ್ಚಾ, ಸೂರ್ಯ ನಮಸ್ಕಾರ ಸಂಘ, ಸ್ಫೂರ್ತಿ ಮೆಲೋಡಿಸ್, ಶ್ರೀ ವೆಲ್ನೆಸ್ ಕ್ಲಬ್, ಸಂಜಯ ಜೀರ್ಗೆ ಡಾನ್ಸ್ ಅಕಾಡೆಮಿ ಕಾರ್ಯಕ್ರಮಕ್ಕೆ ಸಹಯೋಗ ನೀಡಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.