ಜನವಾಡ| ನಮ್ಮ ಹಳ್ಳಿಯ ಜಾನಪದ ಸಂಭ್ರಮ ಕಾರ್ಯಕ್ರಮ

ಜನವಾಡ: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಜನಪದ ಕಲಾವಿದರ ಬಳಗದ ಆಶ್ರಯದಲ್ಲಿ ಕರ್ನಾಟಕ-ತೆಲಂಗಾಣ ಗಡಿ ಸಮೀಪ ಬೀದರ್ ತಾಲ್ಲೂಕಿನ ಮಲ್ಕಾಪುರ ಗ್ರಾಮದಲ್ಲಿ ನಮ್ಮ ಹಳ್ಳಿಯ ಜಾನಪದ ಸಂಭ್ರಮ ಕಾರ್ಯಕ್ರಮ ನಡೆಯಿತು.
ಬೀದರ್ ದಕ್ಷಿಣ ಶಾಸಕ ಬಂಡೆಪ್ಪ ಕಾಶೆಂಪೂರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ‘ಇಂದು ಹಳ್ಳಿಗಳಲ್ಲೇ ನೆಲಮೂಲದ ಸಂಸ್ಕೃತಿ ಹಾಗೂ ಕಲೆಗಳು ಉಳಿದುಕೊಂಡಿವೆ. ಇಂತಹ ಕಾರ್ಯಕ್ರಮಗಳ ಮೂಲಕ ಕಲೆ ಹಾಗೂ ಕಲಾವಿದರನ್ನು ಪೋಷಿಸಬೇಕಾಗಿದೆ’ ಎಂದರು.
ಬಿಜೆಪಿ ಮುಖಂಡ ಶೈಲೇಂದ್ರ ಬೆಲ್ದಾಳೆ ಮಾತನಾಡಿ, ಇಂತಹ ಕಾರ್ಯಕ್ರಮಗಳ ದೇಸಿಯ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಜನಪದ ಕಲಾವಿದರ ಬಳಗದ ಅಧ್ಯಕ್ಷ ವಿಜಯಕುಮಾರ ಸೋನಾರೆ ಅಧ್ಯಕ್ಷತೆ ವಹಿಸಿದ್ದರು. ಮುಖಂಡ ಬಾಬುರಾವ ಮಲ್ಕಾಪೂರೆ, ನೃತ್ಯ ಕಲಾವಿದ ಬಳ್ಳಾರಿಯ ಬಸವರಾಜ ಮಾತನಾಡಿದರು. ಪಿಡಿಒ ವೀರಶೆಟ್ಟಿ ಪಾಟೀಲ ಮತ್ತು ಮುಖಂಡ ವಿಕ್ರಮ ಮುದಾಳೆ ಇದ್ದರು.
ನರಸಿಂಹಂಲು ಡಪ್ಪೂರ, ಮಹೇಶ ಕುಂಬಾರ, ಶಿವಾನಿ ಸ್ವಾಮಿ, ಮಲ್ಲಿಕಾರ್ಜುನ ಸ್ವಾಮಿ, ಮಲ್ಲಿಕಾರ್ಜುನ ನಾಗಮಾರಪಳ್ಳಿ, ಸಂಜುಕುಮಾರ ಉಜನಿ, ಡಿಲೈಮಾ ಆಣದೂರ, ದೇವದಾಸ ಚಿಮಕೋಡ, ರಮೇಶ ದೊಡ್ಡಿ, ಮಧುಕರ ಘೋಡ್ಕೆ , ಸುನೀಲ ಕಡ್ಡೆ, ಶಂಕರ ಚೊಂಡಿ, ಚಿನ್ನಮ್ಮಾ ಲಾಧಾ ಕಾರ್ಯಕ್ರಮ ನಡೆಸಿಕೊಟ್ಟರು.
ಸುಧಾಕರ ಎಲ್ಲಾನೋರ್ ನಿರೂಪಿಸಿದರು. ಸುನೀಲ ಕಡ್ಡೆ ಸ್ವಾಗತಿಸಿದರು. ಯೇಸುದಾಸ ಅಲುಂಬುರೆ ವಂದಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.