ಮಂಗಳವಾರ, 20 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔರಾದ್: ಐದು ಮರಿಗಳಿಗೆ ಜನ್ಮ ನೀಡಿದ ಮೇಕೆ

Published 13 ಜನವರಿ 2024, 15:11 IST
Last Updated 13 ಜನವರಿ 2024, 15:11 IST
ಅಕ್ಷರ ಗಾತ್ರ

ಔರಾದ್: ತಾಲ್ಲೂಕಿನ ಹೆಡಗಾಪುರ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಬಸವರಾಜ ಲಾಲಪ್ಪ ಅವರ ಮೇಕೆ ಶುಕ್ರವಾರ ಐದು ಮರಿಗಳಿಗೆ ಜನ್ಮ ನೀಡಿದ್ದು, ಅಕ್ಕ-ಪಕ್ಕದ ಊರಿನ ಜನ ಈ ಮರಿಗಳು ನೋಡಲು ಬರುತ್ತಿದ್ದಾರೆ. ನಾಲ್ಕು ಗಂಡು ಹಾಗೂ ಒಂದು ಹೆಣ್ಣು ಮರಿ ಆರೋಗ್ಯದಿಂದಿವೆ.

ಇದೇ ಮೇಕೆ ಈ ಮೊದಲು ಮೂರು, ಎರಡನೇ ಹೆರಿಗೆಯಲ್ಲಿ ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು ಎಂದು ಬಸವರಾಜ ಲಾಲಪ್ಪ ತಿಳಿಸಿದ್ದಾರೆ. ಮೇಕೆಗಳು ಎರಡು-ಮೂರು ಮರಿಗಳಿಗೆ ಜನ್ಮ ನೀಡುವುದು ಸಹಜ. ಐದು ಮರಿ ಹಾಕುವುದು ಅಪರೂಪ. ಅವುಗಳಿಗೆ ಗುಣಮಟ್ಟದ ಆಹಾರ ಒದಗಿಸಿದರೆ ಈ ರೀತಿ ಹೆಚ್ಚು ಮರಿ ಕೊಡುವ ಸಾಮರ್ಥ್ಯ ಹೊಂದಿರುತ್ತವೆ’ ಎಂದು ಪಶು ವೈದ್ಯ ರವಿ ಬಾವುಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT