ಶನಿವಾರ, ಮಾರ್ಚ್ 25, 2023
24 °C

ಕಿರಿಯ ಇಂಜಿನಿಯರ್‌ ಸುರೇಶ್‌ ಮೋರೆಯ ಮನೆ ಮೇಲೆ ಎಸಿಬಿ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani Photo

ಬೀದರ್: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪ ಎದುರಿಸುತ್ತಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಿರಿಯ ಎಂಜಿನಿಯರ್ ಸುರೇಶ ಮೋರೆ ಅವರ ಬಸವಕಲ್ಯಾಣದ ಶಿವಾಜಿನಗರ ಹಾಗೂ ಭಾಲ್ಕಿ ತಾಲ್ಲೂಕಿನ ಮೆಹಕರ್ ಗ್ರಾಮದಲ್ಲಿರುವ ಮನೆಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಬಸವಕಲ್ಯಾಣದಲ್ಲಿ ಮೂರು ಅಂತಸ್ತಿನ ಮನೆ, ಮೆಹಕರ್‌ದಲ್ಲಿ ಒಂದು ಮನೆ ಹಾಗೂ ಪೆಟ್ರೋಲ್ ಬಂಕ್ ಇರುವ ಮಾಹಿತಿ ಇದೆ. ಎಸಿಬಿ ಕಲಬುರ್ಗಿ ಎಸ್‌ಪಿ ಮಹೇಶ ಮೆಗ್ಗಣವರ ಮಾರ್ಗದರ್ಶನದಲ್ಲಿ ಬೀದರ್ ಎಸಿಬಿ ಡಿಎಸ್ಪಿ ಹಣಮಂತರಾತ್‌ ನೇತೃತ್ವದ ಒಂದು ತಂಡ ಬಸವಕಲ್ಯಾಣದಲ್ಲಿ, ಇನ್ನೊಂದು ತಂಡ ಮೆಹಕರ್‌ದಲ್ಲಿ ದಾಖಲೆಗಳನ್ನು ಪರಿಶೀಲಿಸುತ್ತಿದೆ.

ಒಂಬತ್ತು ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ: ರಾಜ್ಯದ ಹಲವೆಡೆ ಶೋಧ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು