ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔರಾದ್ | ಕೆಟ್ಟು ನಿಂತ ಟ್ರ್ಯಾಕ್ಟರ್‌ಗೆ ಡಿಕ್ಕಿ: ಶಿಕ್ಷಕ ಸಾವು

Published 29 ಜನವರಿ 2024, 8:44 IST
Last Updated 29 ಜನವರಿ 2024, 8:44 IST
ಅಕ್ಷರ ಗಾತ್ರ

ಔರಾದ್: ಬೀದರ್-ನಾಂದೇಡ್ ಹೆದ್ದಾರಿ ವನಮಾರಪಳ್ಳಿ ಬಳಿ ಕೆಟ್ಟು ನಿಂತ ಟ್ರ್ಯಾಕ್ಟರ್ ಟ್ರ್ಯಾಲಿಗೆ ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟಿದ್ದಾರೆ.

ಮೃತ ಯುವಕ ಬಾಬುರಾವ ಶಂಕರ ವಾಘಮಾರೆ (42). ಖಾಸಗಿ ಶಾಲೆ ಶಿಕ್ಷಕರಾಗಿರುವ ಬಾಬುರಾವ ಭಾನುವಾರ ರಾತ್ರಿ ತಮ್ಮ ಊರು ವನಮಾರಪಳ್ಳಿಗೆ ಹೋಗುವಾಗ ಈ ಘಟನೆ ಸಂಭವಿಸಿದೆ.

ಕತ್ತಲಲ್ಲಿ ಟ್ರ್ಯಾಕ್ಟರ್ ಟ್ರ್ಯಾಲಿ ನಿಂತಿದ್ದು ಕಾಣದೆ ಬೈಕ್ ಡಿಕ್ಕಿಯಾಗಿದೆ. ಘಟನೆಯಲ್ಲಿ ತೀವ್ರ ಗಾಯಗೊಂಡ ಬಾಬುರಾವ ಅವರನ್ನು ಬೀದರ್ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾದೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಔರಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT