ಬೀದರ್: ಉತ್ತರ ಪ್ರದೇಶದ ವಾರಾಣಸಿ ಸಮೀಪ ಶುಕ್ರವಾರ ನಸುಕಿನ ಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೀದರ್ ನ ಐದು ಜನ ಸಾವನಪ್ಪಿದ್ದಾರೆ. ಏಳು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.

ನಗರದ ಲಾಡಗೇರಿ ನಿವಾಸಿಗಳಾದ ಲಕ್ಷ್ಮಿ (57), ನೀಲಮ್ಮಾ (62), ಸಂತೋಷಕುಮಾರ (45), ಸುನೀತಾ (40), ಕಲಾವತಿ ಹ (40) ಮೃತಪಟ್ಟವರು.

ಸುಲೋಚನಾ, ಸುಜಾತ, ಕವಿತಾ, ಅನಿತಾ, ಖುಷಿ, ಗಣೇಶ, ಸಾಯಿ, ಭಗವಂತ ಹಾಗೂ ಶಿವಾ ಗಾಯಗೊಂಡವರು.

ವಾರಾಣಸಿಯ ರೂಪಾಪೂರ ಬಳಿ ಶುಕ್ರವಾರ ನಸುಕಿನ ಜಾವ ಹೆದ್ದಾರಿ ಬದಿಯಲ್ಲಿ ನಿಂತಿದ್ದ ಲಾರಿಗೆ ಕುಂಭಮೇಳದ ಭಕ್ತರಿದ್ದ ಕ್ರೂಸರ್ ಡಿಕ್ಕಿ ಹೊಡೆದಿದ್ದು, ವಾಹನ ನುಜ್ಜುಗುಜ್ಜಾಗಿದೆ. ಸ್ಥಳದಲ್ಲೇ ಐವರು ಮೃತಪಟ್ಟಿದ್ದಾರೆ.

ಫೆ. 18ರಂದು ಬೀದರ್ ನಿಂದ ಪ್ರಯಾಗರಾಜ್ ಗೆ ತೆರಳಿದ್ದರು. ಕುಂಭಮೇಳದ ಪುಣ್ಯಸ್ನಾನ ಮಾಡಿ, ವಾರಾಣಸಿಗೆ ಭೇಟಿ ಕೊಟ್ಟು ಹಿಂತಿರುಗುವಾಗ ಈ ಘಟನೆ ನಡೆದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.