ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜನವಾಡ | ಡಿಮ್ಯಾಂಡ್ ರಿಜಿಸ್ಟರ್‌ನಲ್ಲಿ ಕೃಷಿ ಭೂಮಿ ಸೇರ್ಪಡೆ: ದೂರು

Published 26 ಜೂನ್ 2024, 14:46 IST
Last Updated 26 ಜೂನ್ 2024, 14:46 IST
ಅಕ್ಷರ ಗಾತ್ರ

ಜನವಾಡ: ‘ಬೀದರ್ ತಾಲ್ಲೂಕಿನ ಗುಮ್ಮಾ ಗ್ರಾಮದ ಸರ್ವೇ ಸಂಖ್ಯೆ 86/2 ರಲ್ಲಿರುವ ಕೃಷಿ ಭೂಮಿಯನ್ನು ನಿಯಮ ಬಾಹಿರವಾಗಿ ಅಷ್ಟೂರ ಗ್ರಾಮ ಪಂಚಾಯಿತಿಯ ಡಿಮ್ಯಾಂಡ್ ರಿಜಿಸ್ಟರ್‌ನಲ್ಲಿ ಸೇರ್ಪಡೆ ಮಾಡಲಾಗಿದೆ’ ಎಂದು ಬಿಜೆಪಿಯ ಬೀದರ್ ಗ್ರಾಮಾಂತರ ಮಂಡಲದ ಪಂಚಾಯತ್‍ರಾಜ್ ಪ್ರಕೋಷ್ಠ ಸಂಚಾಲಕ ದಿಲೀಪಕುಮಾರ ಬಾಬಶೆಟ್ಟಿ ಆರೋಪಿಸಿದ್ದಾರೆ.

ಈ ಕುರಿತು ಅವರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.
‘ಗಂಗಮ್ಮ ಬಸವರಾಜ ಎಂಬುವರಿಗೆ ಸೇರಿದ 4 ಎಕರೆ 21 ಗುಂಟೆ ಜಮೀನಿನಲ್ಲಿ ವಸತಿಗೆ ಸಂಬಂಧಿಸಿದ ಯಾವುದೇ ಸೌಕರ್ಯಗಳಿಲ್ಲ. ಅದಾಗಿಯೂ ನಿವೇಶನ ಮಾಡಿ ಮಾರಾಟ ಮಾಡುವ ಹುನ್ನಾರ ನಡೆದಿದೆ. ಕಾರಣ, ಕೃಷಿಯೇತರ ಭೂಮಿಯಾಗಿ ಡಿಮ್ಯಾಂಡ್ ರಿಜಿಸ್ಟರ್‌ನಲ್ಲಿ ಸೇರ್ಪಡೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT