ಬುಧವಾರ, ಜನವರಿ 26, 2022
25 °C

ಔರಾದ್‍: ಏಡ್ಸ್ ಜಾಗೃತಿ ಜಾಥಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಔರಾದ್: ‘ಏಡ್ಸ್ ರೋಗದ ಕುರಿತು ಜಾಗೃತಿ ಅಗತ್ಯ’ ಎಂದು ಡಾ. ಕಿರಣ ತಿಳಿಸಿದರು.

ಇಲ್ಲಿಯ ಅಮರೇಶ್ವರ ಕಾಲೇಜಿನಲ್ಲಿ ನಡೆದ ಏಡ್ಸ್ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ,‘ಏಡ್ಸ್ ಮಾರಣಾಂತಿಕ ರೋಗ. ಯುವ ಜನಾಂಗ ಈ ಕುರಿತು ತಿಳವಳಿಕೆ  ಅಗತ್ಯ’ ಎಂದು ಸಲಹೆ ನೀಡಿದರು.

ಪ್ರಾಂಶುಪಾಲ ಶರಣಪ್ಪ ಬಿರಾದಾರ ಮಾತನಾಡಿ,‘ದಶಕದ ಹಿಂದೆ ಏಡ್ಸ್ ರೋಗ ಸಾಕಷ್ಟು ಅಪಾಯ ತಂದೊಡ್ಡಿತ್ತು. ಸೂಕ್ತ ತಿಳವಳಿಕೆಯಿಂದ ನಿಯಂತ್ರಣಕ್ಕೆ ಬಂದಿದೆ’ ಎಂದರು.

ಮಹಾಂತೇಶ ಪಾಟೀಲ, ಉಷ್ಪಾಂಜಲಿ ಪಾಟೀಲ ಉಪಸ್ಥಿತರಿದ್ದರು. ಉಪನ್ಯಾಸಕ ರೇವಣಯ್ಯ ಮಠ, ಲೋಕೇಶ ಮಾಳೆಗಾಂವ್ ಮತ್ತಿತರರು ಪಾಲ್ಗೊಂಡರು. ನಂತರ ಪಟ್ಟಣದಲ್ಲಿ ಜಾಗೃತಿ ಜಾಥಾ ನಡೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.