ಶನಿವಾರ, ಮೇ 21, 2022
27 °C

ಅಕ್ಕಮಹಾದೇವಿ ವಚನಗಳಲ್ಲಿ ಬದುಕಿನ ಮೌಲ್ಯ; ಮಾಲಾಶ್ರೀ ಶಾಮರಾವ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಟಗುಪ್ಪ: ನಾಡಿನ ವಚನಕಾರರಲ್ಲಿ ಅಕ್ಕಮಹಾದೇವಿ ಪ್ರಮುಖರಾಗಿದ್ದವರು ಎಂದು ಪುರಸಭೆ ಅಧ್ಯಕ್ಷೆ ಮಾಲಾಶ್ರೀ ಶಾಮರಾವ್‌ ಹೇಳಿದರು.

ಇಲ್ಲಿಯ ಪುರಸಭೆ ಕಚೇರಿಯಲ್ಲಿ ನಡೆದ ಅಕ್ಕಮಹಾದೇವಿ ಜಯಂತಿ ಕಾರ್ಯ ಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ಸಂಪತ್ತು, ವೈಭವ, ಭೋಗ ಜೀವನ ತಿರಸ್ಕರಿಸಿ ಈ ಎಲ್ಲ ಬಂಧನಗಳಿಂದ ಬಿಡುಗಡೆ ಪಡೆದು, ಸಾಮಾನ್ಯರಂತೆ ಜನಜೀವನ ನಡೆಸಿದವರು. ಬದುಕಿನ ಮೌಲ್ಯಗಳನ್ನು ವಚನಗಳ ಮೂಲಕ ಪ್ರತಿಪಾದಿಸಿದ್ದರು ಎಂದರು.

ಲೆಕ್ಕಿಗ ನರೇಶ್‌ ಘನಾತೆ ಮಾತ ನಾಡಿದರು. ಉಪಾಧ್ಯಕ್ಷೆ ಸೌಭಾಗ್ಯವತಿ ಸ್ವಾಮಿ, ಸಿಬ್ಬಂದಿ ಚಿದಾನಂದ ಪತ್ರಿ, ಕಿರಿಯ ಆರೋಗ್ಯ ನಿರೀಕ್ಷಕ ರವಿ ಕುಮಾರ್‌, ವೈಶಾಲಿ, ಕವಿತಾ, ಸರೋಜನಿ, ರಾಜಕುಮಾರ್‌, ದಿಲೀಪ್‌, ಬಕ್ಕಪ್ಪ, ರವಿ ಭಯ್ಯ, ನಥಾನಿಯೆಲ್‌, ಸಚಿನ್‌, ಬಕ್ಕಣ್ಣ, ಮಂಜುನಾಥ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು