ಶನಿವಾರ, ನವೆಂಬರ್ 27, 2021
20 °C

ಅಂಗಾರಕ ಸಂಕಷ್ಟ ಚತುರ್ಥಿ: ಭಕ್ತರಿಗೆ ಪ್ರಸಾದ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಅಂಗಾರಕ ಸಂಕಷ್ಟ ಚತುರ್ಥಿ ಪ್ರಯುಕ್ತ ಹಣ್ಮು ಪಾಜಿ ಗೆಳೆಯರ ಬಳಗದ ವತಿಯಿಂದ ಕರ್ನಾಟಕ-ತೆಲಂಗಾಣ ಗಡಿಯ ಜಹೀರಾಬಾದ್ ರಸ್ತೆಯಲ್ಲಿ ಇರುವ ಸಾಯಿ ಧಾಮ ರೆಸ್ಟೊರಂಟ್ ಬಳಿ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.

ಹರಕೆ ತೀರಿಸಲು ರೇಜಂತಲ್ ಗಣೇಶ ಮಂದಿರಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣದ ಭಕ್ತರಿಗೆ ಬಳಗದ ಸದಸ್ಯರು ಅನ್ನ ಪ್ರಸಾದ, ಬಾಳೆ ಹಣ್ಣು, ಬಿಸ್ಕತ್, ಹಾಲು ಹಾಗೂ ಕುಡಿಯುವ ನೀರಿನ ಬಾಟಲಿಗಳನ್ನು ನೀಡಿದರು.

ಬಳಗವು ಪ್ರತಿ ವರ್ಷ ರೇಜಂತಲ್ ಗಣೇಶ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡುತ್ತ ಬಂದಿದೆ. ಈ ಬಾರಿ ಕೋವಿಡ್ ನಿಯಂತ್ರಣಕ್ಕೆ ಬಂದ ಕಾರಣ ಸಂಕಷ್ಟ ವಿಮೋಚಕನ ಮಂದಿರಕ್ಕೆ ತೆರಳುವ ಭಕ್ತರ ಸಂಖ್ಯೆ ಅಧಿಕವಾಗಿದೆ ಎಂದು ಜಿಲ್ಲೆಯವರೇ ಆದ ಚಿತ್ರನಟ ಹಣ್ಮು ಪಾಜಿ ನುಡಿದರು.

ನೂರಾರು ಭಕ್ತರು ಪ್ರಸಾದ ಸ್ವೀಕರಿಸಿದ್ದಾರೆ. ಅನೇಕರು ಬಳಗದಿಂದ ಹಾಕಿದ್ದ ಟೆಂಟ್‍ನಲ್ಲಿ ವಿಶ್ರಾಂತಿ ಪಡೆದಿದ್ದಾರೆ. ಭಕ್ತರ ಸೇವೆ ಮಾಡಿದ ಬಳಗದ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.

ಬಳಗದ ಸದಸ್ಯರಾದ ನಾಮದೇವ, ಸಂಗಮೇಶ, ನರಸಿಂಗ್, ರಾಕೇಶ, ವಿಕ್ಕಿ ಅಭಿಷೇಕ, ಪಂಡಿತ, ಅನಿಲ್ ಸೋಳಂಕೆ, ಮಲ್ಲು ಗುಂಪಾ, ರಾಹುಲ್, ಅಂಬು ಶಹಾಪುರ, ಕೃಷ್ಣ, ಪವನ್ ಇದ್ದರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು