ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆಶಾ ಕಾರ್ಯಕರ್ತೆಯರ ಸನ್ಮಾನ

Published 6 ಏಪ್ರಿಲ್ 2024, 5:39 IST
Last Updated 6 ಏಪ್ರಿಲ್ 2024, 5:39 IST
ಅಕ್ಷರ ಗಾತ್ರ

ಬೀದರ್‌: ಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ಘಟಕ, ಸಿರಿಗನ್ನಡ ವೇದಿಕೆ, ರೂಪಾ ಕಲೆ ಸಾಹಿತ್ಯ ಹಾಗೂ ಸಾಂಸ್ಕೃತಿಕ ಟ್ರಸ್ಟ್‌ ಸಹಯೋಗದಲ್ಲಿ ಮಹಿಳಾ ದಿನಾಚರಣೆ, ಆಶಾ ಕಾರ್ಯಕರ್ತೆಯರ ಸನ್ಮಾನ ನಗರದ ಕುಂಬಾರವಾಡದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.

ಡಾ. ವೈಶಾಲಿ ಕಾರ್ಯಕ್ರಮ ಉದ್ಘಾಟಿಸಿ,  ಆಶಾ ಕಾರ್ಯಕರ್ತೆಯರು ಸಮಾಜಕ್ಕಾಗಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಅವರನ್ನು ಸನ್ಮಾನಿಸಿರುವುದು ಶ್ಲಾಘನಾರ್ಹ ಎಂದರು.

ಸುವರ್ಣ ಧನ್ನೂರ ಮಾತನಾಡಿ, ಹೆಣ್ಣುಮಕ್ಕಳು ಯಾರಿಗೂ ಕಮ್ಮಿ ಇಲ್ಲ. ಅವರ ಕನಸು ಸಾಕಾರಗೊಳಿಸಲು ಎಲ್ಲರೂ ಸಹಕಾರ ಕೊಡಬೇಕು ಎಂದು ಹೇಳಿದರು. 

ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ರೂಪ ಪಾಟೀಲ ಮಾತನಾಡಿ, ಮಹಿಳೆಯರನ್ನು ಮಹಿಳೆಯರು ಗೌರವಿಸಿ, ಸಹಕರಿಸಬೇಕು. ಹೆಣ್ಣು ಹೆಣ್ಣಿಗೆ ಶತ್ರು ಎನ್ನುವುದನ್ನು ಮರೆಯಬೇಕು. ಹೆಣ್ಣು ಮಕ್ಕಳು ಮುಂದೆ ಬರಲು ಸಾಧ್ಯವಾಗುತ್ತದೆ ಎಂದರು.

ಪ್ರಾಧ್ಯಾಪಕಿ ವಿದ್ಯಾವತಿ ಬಲ್ಲೂರ್‌ ಮಾತನಾಡಿ, ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಅವಳು ಅಬಲೆಯಲ್ಲ ಸಬಲೆ ಎಂದು ಹೇಳಿದರು.

ಶ್ರೇಯಾ ಮಹಿಂದ್ರಕರ್, ಸ್ವರೂಪರಾಣಿ ನಾಗೂರೆ, ದೀಪಿಕಾ ರಗಟೆ, ಸುಜಾತ ಹೊಸಮನಿ, ಸ್ಫೂರ್ತಿ ಧನ್ನೂರ ಹಾಜರಿದ್ದರು. 19 ಜನ ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು . 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT