ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಔರಾದ್: ಫುಟ್‌ಪಾತ್‌ ಅತಿಕ್ರಮಣ ತೆರವು

Published 4 ಜುಲೈ 2024, 14:34 IST
Last Updated 4 ಜುಲೈ 2024, 14:34 IST
ಅಕ್ಷರ ಗಾತ್ರ

ಔರಾದ್: ಪಟ್ಟಣದ ಪ್ರಮುಖ ಫುಟ್‌ಪಾತ್‌ ಅತಿಕ್ರಮಿಸಿದ ಶೆಡ್, ಡಬ್ಬಾ, ತಳ್ಳುಗಾಡಿ ತೆರವು ಕಾರ್ಯಾಚರಣೆ ಗುರುವಾರ ಆರಂಭವಾಗಿದೆ.

ಮೂರು ದಿನಗಳ ಹಿಂದೆಯೇ ಸೂಚನೆ ನೀಡಿದರೂ ರಸ್ತೆ ಬದಿ ಹಾಗೂ ಫುಟ್‌ಪಾತ್‌ ಮೇಲಿನ ಅಂಗಡಿಗಳು ಹಾಗೆಯೇ ಇದ್ದವು. ಪಟ್ಟಣ ಪಂಚಾಯತ್ ಸಿಬ್ಬಂದಿ ಬೆಳಿಗ್ಗೆ ಜೆಸಿಬಿ ತಂದು ಅಂಗಡಿಗಳನ್ನು ತೆರವುಗೊಳಿಸಿದರು.

ಪಟ್ಟಣದ ಇಂದಿರಾ ಕ್ಯಾಂಟೀನ್‌ನಿಂದ ಆರಂಭವಾದ ತೆರವು ಕಾರ್ಯಾಚರಣೆ ಭರದಿಂದ ಸಾಗಿದೆ. 10ಕ್ಕೂ ಹೆಚ್ಚು ಶೆಡ್‌ಗಳು, 15 ಡಬ್ಬಾಗಳನ್ನು ತೆರವುಗೊಳಿಸಿದರು.

‘ಸಾರ್ಜನಿಕರಿಗೆ ಸುಗಮ ಸಂಚಾರಕ್ಕಾಗಿ ಅತಿಕ್ರಮಣ ತೆರವು ಅಗತ್ಯವಾಗಿದೆ. ಇಲ್ಲಿ ದೊಡ್ಡವರು, ಸಣ್ಣವರು ಎಂಬ ಪ್ರಶ್ನೆ ಇಲ್ಲ. ರಸ್ತೆ ಬದಿ ಹಾಗೂ ರಸ್ತೆ ಮೇಲಿರುವ ಎಲ್ಲ ಅಂಗಡಿಗಳು ತೆರವುಗೊಳಿಸಲಾಗುವುದು’ ಎಂದು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸ್ವಾಮಿದಾಸ ತಿಳಿಸಿದ್ದಾರೆ.

ಮೊದಲ ಹಂತದಲ್ಲಿ ಪಟ್ಟಣದ ಎಪಿಎಂಸಿಯಿಂದ ಸರ್ಕಾರಿ ಆಸ್ಪತ್ರೆವರೆಗಿನ ತೆರವು ಮುಗಿಸಿ ಚರಂಡಿ ಹೂಳು ತೆಗೆಯುತ್ತೇವೆ. ನಂತರ ಬೇರೆ ಬೇರೆ ಕಡೆ ಅತಿಕ್ರಮಣವಾದ ಎಲ್ಲ ಅಂಗಡಿಗಳು ತೆರವು ಮಾಡುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT