ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅರಣ್ಯ ಇಲಾಖೆಯಿಂದ ಖಾಸಗಿ ಜಾಗದಲ್ಲಿನ ಮನೆ ನೆಲಸಮ’: ಬಹುಜನ ಸಮಾಜ ಪಕ್ಷ

Published 23 ಡಿಸೆಂಬರ್ 2023, 14:39 IST
Last Updated 23 ಡಿಸೆಂಬರ್ 2023, 14:39 IST
ಅಕ್ಷರ ಗಾತ್ರ

ಬೀದರ್: ‘ತಾಲ್ಲೂಕಿನ ಹಳ್ಳದಕೇರಿಯಲ್ಲಿ ಅರಣ್ಯ ಇಲಾಖೆಯವರು ಖಾಸಗಿ ಜಾಗೆಯಲ್ಲಿನ ಮನೆ ನೆಲಸಮ ಮಾಡಿದ್ದಾರೆ‘ ಎಂದು ಬಹುಜನ ಸಮಾಜ ಪಕ್ಷ ದೂರಿದೆ.

ಈ ಬಗ್ಗೆ ಪಕ್ಷದ ಮುಖಂಡರು ಜಿಲ್ಲಾಧಿಕಾರಿಗೆ ಮನವಿಪತ್ರ ಸಲ್ಲಿಸಿದ್ದಾರೆ.

‘ಅರಣ್ಯ ಇಲಾಖೆಯವರು ಕಳೆದ ಡಿ.14ರಂದು ಹಳ್ಳದಕೇರಿ ಸರ್ವೆ ನಂ.99ರ ಖಾತೆ 3ರಲ್ಲಿ ಇರುವ ಮನೆಗಳನ್ನು ನೆಲಸಮ ಮಾಡಿದ್ದಾರೆ. ಇದು ಖಾಸಗಿ ಜಮೀನು. ಇಲ್ಲಿ ಬಡವರು ನಿವೇಶನ ಖರೀದಿ ಮಾಡಿ ಮನೆ ಕಟ್ಟಿಕೊಂಡಿದ್ದಾರೆ. ಆದರೆ ಅರಣ್ಯ ಇಲಾಖೆಯವರ ದಬ್ಬಾಳಿಕೆಯಿಂದಾಗಿ ಈ ಜನರಿಗೆ ಅನ್ಯಾಯವಾಗಿದೆ. ಈ ಬಗ್ಗೆ ಪರಿಶೀಲಿಸಿ ತೊಂದರೆ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿ ಆಗಿರುವ ನಷ್ಟ ಭರಿಸಿಕೊಡಬೇಕು’ ಎಂದು ಆಗ್ರಹಿಸಿದರು.

ಬಿಎಸ್‍ಪಿ ರಾಜ್ಯ ಕಾರ್ಯದರ್ಶಿ ದತ್ತು ಸೂರ್ಯವಂಶಿ, ಮುಖಂಡ ದತ್ತಪ್ಪ ಭಂಡಾರಿ, ಸಂಜೀವಕುಮಾರ ಮೇಧಾ, ಗುಣವಂತ ಸೂರ್ಯವಂಶಿ, ಉಮೇಶ ಗುತ್ತೆದಾರ, ನಾಗೇಶ್ ಬಂಗಾರೆ, ಅಶೋಕ ಮಂಠಾಳಕರ್, ಅಬ್ದುಲ್ ಶೇಖ್, ಅಮೀರ್ ಅಹ್ಮದ್, ಶಾಮ ಶರ್ಮಾ, ಯೇಸುದಾಸ, ಧನರಾಜ, ಸಂಜುಕುಮಾರ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT