ಮಂಗಳವಾರ, ಜೂನ್ 15, 2021
24 °C

ಔರಾದ್: ಎಟಿಎಂ ಕಿತ್ತೊಯ್ದ ಕಳ್ಳರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಔರಾದ್: ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಉಪ್ಪೆ ಪೆಟ್ರೋಲ್ ಬಂಕ್ ಎದುರಿನ ಮಳಿಗೆಯಲ್ಲಿ  ಅಳವಡಿಸಿದ್ದ ಎಟಿಎಂ ಯಂತ್ರವನ್ನೇ ಕಳ್ಳರು ಕಿತ್ತೊಯ್ದಿದ್ದಾರೆ.

ಮಂಗಳವಾರ ನಸುಕಿನ ಜಾವ ಕೃತ್ಯ ನಡೆದಿರುವ ಮಾಹಿತಿ‌ ಇದೆ.  ಸಿಸಿಟಿವಿ ಕ್ಯಾಮೆರಾ ಧ್ವಂಸಗೊಳಿಸಿ ಟಾಟಾ ಕಂಪನಿಯ ಇಂಡಿಕ್ಯಾಶ್ ಮಷಿನ್ ಕಿತ್ತು ವಾಹನದಲ್ಲಿ ಹಾಕಿಕೊಂಡು ‌ಪರಾರಿಯಾಗಿರುವ ಸುಳಿವು ಸಿಕ್ಕಿದೆ ಎಂದು ಪೋಲಿಸರು ತಿಳಿಸಿದ್ದಾರೆ.

ಸ್ಥಳಕೆ ಇಂಡಿಕ್ಯಾಶ್ ಕಂಪನಿ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಔರಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.